ಜಿಲ್ಲೆ

ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ

ಸೌಮ್ಯ ಆರ್

ಕಾಸರಗೋಡು: ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದ ದುರಂತ ತಪ್ಪಿದೆ. ಕಾಞಂಗಾಡಿನಲ್ಲಿ ಶುಕ್ರವಾರ ಘಟನೆ ನಡೆದಿದೆ. ಕಾಸರಗೋಡಿನಿಂದ ಪಯ್ಯನ್ನೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಕಾಞಂಗಾಡು ಕೋಟಚ್ಚೇರಿಯ ಟ್ರಾಫಿಕ್ ಸರ್ಕಲ್ ಬಳಿ ತಲುಪುತ್ತಿದ್ದಂತೆ ಬಸ್‌ನ ಎದುರುಭಾಗದಿಂದ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ರಸ್ತೆ ಅಂಚಿಗೆ ಬಸ್‌ನ್ನು ನಿಲುಗಡೆಗೊಳಿಸಿದ್ದಾರೆ. ತಕ್ಷಣ ಪ್ರಯಾಣಿಕರು ಬಸ್‌ನಿಂದ ಇಳಿದಿದ್ದು, ಸ್ಥಳದಲ್ಲಿದ್ದ ತಲೆಹೊರೆ ಕಾರ್ಮಿಕರು, ಹೋಮ್‌ಗಾರ್ಡ್‌ಗಳು ಸನಿಹದಿಂದ ನೀರು ತಂದು ಬಸ್‌ಗೆ ಹಾಯಿಸಿ ಬೆಂಕಿ ಶಮನಗೊಳಿಸುವಲ್ಲಿ ಯಶಸ್ವಿಯಾದರು. ಶಾರ್ಟ್ ಸರ್ಕ್ಯೂಟ್ ಬೆಂಕಿ ಆಕಸ್ಮಿಕಕ್ಕೆ ಕಾರಣವೆನ್ನಲಾಗಿದೆ.