ಜಿಲ್ಲೆ

ಅಂಗಡಿಯಲ್ಲಿ ಅಗ್ನಿ ಅವಘಡ

Mangaluru - Nishantha Narayana

ವಿಟ್ಲ: ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿರುವ ಅಂಗಡಿಯೊಂದರಲ್ಲಿ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.

ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ನೆತ್ರಕೆರೆ ನಿವಾಸಿ ಮಹೇಶ್ ಭಟ್ ಅವರಿಗೆ ಸೇರಿದ ಜನರಲ್ ಸ್ಟೋರ್ ಬಂದ್ ಮಾಡಿ ಕೆಲವೇ ಸಮಯದಲ್ಲಿ ಅಂಗಡಿ ಒಳಗಿನಿಂದ ಹೊಗೆ ಕಾಣಿಸಿಕೊಂಡಿದೆ. ಬಾಗಿಲು ತೆರೆದಾಗ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಅಂಗಡಿ ಮಾಲಕ ಇಸ್ಮಾಯಿಲ್ ಒಕ್ಕೆತ್ತೂರು ಫೈರ್ ಗ್ಯಾಸ್ ಮೂಲಕ ಬೆಂಕಿ ನಂದಿಸಿದ್ದಾರೆ. ಅಂಗಡಿಯಲ್ಲಿದ್ದ ಕೆಲವು ವಸ್ತುಗಳು ಹಾನಿಯಾಗಿದೆ.