ಜಿಲ್ಲೆ

ಮನೆ ಬೆಂಕಿಗೆ ಆಹುತಿ

ಎ. ಆರ್. ರಘುರಾಮ

ಮಳವಳ್ಳಿ : ತಾಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದ ಹೊರವಲಯದಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ರೇಷ್ಮೆ ಹುಳ ಸಾಕಣೆ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ರೇಷ್ಮೆಗೂಡು ಸೇರಿದಂತೆ ಬೆಲೆಬಾಳು ವಸ್ತುಗಳು ಭಸ್ಮವಾಗಿವೆ.
ಗ್ರಾಮದ ರೈತ ನಾಗರಾಜು ಎಂಬುವರಿಗೆ ಸೇರಿದ ಮನೆಯಲ್ಲಿ ರೇಷ್ಮೆ ಬಿಚ್ಚಿಕೊಳ್ಳಲು ಸಿದ್ಧತೆ ನಡೆಸಿದ್ದರಿಂದ ಸುಮಾರು 120 ತಡಿಕೆಗೆ ಹುಳುಗಳನ್ನು ಬಿಟ್ಟು ಶೇಖರಣೆ ಮಾಡಲಾಗಿತ್ತು. ತಡರಾತ್ರಿ ದುಷ್ಕರ್ಮಿಗಳು ಮನೆಯ ಸುತ್ತಲೂ ಪೆಟ್ರೊಲ್ ಸುರಿದು ದುಷ್ಕೃತ್ಯ ನಡೆಸಿದ್ದಾರೆ ಎಂದು ನಾಗರಾಜು ಆರೋಪಿಸಿದ್ದಾರೆ. ಈ ಅವಘಡದಿಂದ ರೇಷ್ಮೆ ಗೂಡಿನ ಸಮೇತ ಪರಿಕರಗಳು ಹಾಗೂ ಛಾವಣಿ ಬಹುಪಾಲು ಸುಟ್ಟು ಕರಕಲಾಗಿದೆ. ಅಗ್ನಿ ಶಾಮಕ ವಾಹನ ಬರುವಷ್ಟರಲ್ಲಿ ಬೆಂಕಿ ಬಹುಪಾಲು ಆವರಿಸಿ ಹಾನಿಯಾಗಿತ್ತು ಎನ್ನಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟವಾಗಿದೆ ಎಂದು ಅಂದಾಜಿಲಾಗಿದೆ. ಸ್ಥಳಕ್ಕೆ ಅಗನಿ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್, ಎಎಸ್‌ಐ ದಾಸಪ್ಪ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.