ಧಾರವಾಡ: ಮತದಾರರಿಗೆ ಆಮಿಷವೊಡ್ಡಿದ ಕುರಿತು ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇಲ್ಲಿನ ಹೈಕೋರ್ಟ್ ಪೀಠ ಸೋಮವಾರ ರದ್ದುಪಡಿಸಿದೆ. ನಡ್ಡಾ ಅವರು ವಿಧಾನಸಭೆ ಚುನಾವಣೆ ಅಂಗವಾಗಿ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ೨೦೨೩ರ ಮೇ ೭ರಂದು ನಡೆದ ಪ್ರಚಾರದ ವೇಳೆ ಮತದಾರರಿಗೆ ಆಮಿಷಮೊಡ್ಡಿದ ಆರೋಪ ಕೇಳಿಬಂದಿತ್ತು. ಈ ಕುರಿತು ಮÁಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ಆಧರಿಸಿ ಹರಪನಹಳ್ಳಿ ಪೊಲೀಸರು ಮೇ ೧೧ರಂದು ಸ್ವಯಂಪ್ರೇರಿತ ಎ-ïಐಆರ್ ದಾಖಲಿಸಿಕೊಂಡಿದ್ದರು. ನಡ್ಡಾ ಪರ ವಕೀಲರು ಎ-ïಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ಪೀಠದ ನ್ಯಾ. ಎಂ. ನಾಗಪ್ರಸನ್ನ ಅವರು ಎ-ïಐಆರ್ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.