ಜಿಲ್ಲೆ

ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ...

arunakunigal

ಬೆಂಗಳೂರು: ಕೆಎಎಸ್ ಅಧಿಕಾರಿ ಜಿ.ಟಿ. ದಿನೇಶ್ ಕುಮಾರ್ ವಿರುದ್ಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ನನ್ನನ್ನ ಕೊಲ್ಲಲು ಸಂಚು ರೂಪಿಸಿ ಮಾತ್ರೆ ಬೆರೆಸಿದ್ದ ನೀರನ್ನು ನನ್ನ ಗಂಡನೇ ಕುಡಿಸಿದ್ದಾನೆ ಎಂದು ಕೆಎಎಸ್ ಅಧಿಕಾರಿ ಪತ್ನಿ ಕೆ.ಪಿ.ದೀಪ್ತಿ ದೂರು ನೀಡಿದ್ದಾರೆ. ಸದ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ದೀಪ್ತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿರಿ ಧಾರವಾಡದಲ್ಲಿ ಭೀಕರ ಅಪಘಾತ: ಸಾವಿಗೂ ಮುನ್ನ ಬಾಲ್ಯ ಸ್ನೇಹಿತೆಯರ ಸುಂದರ ಕ್ಷಣಗಳ ಎಕ್ಸ್​ಕ್ಲೂಸಿವ್​ ವಿಡಿಯೋ ಇಲ್ಲಿದೆ​

ಚಿತ್ರದುರ್ಗ ಜಿಲ್ಲೆಯ ಸಂತೆಬೆನ್ನೂರು ನಿವಾಸಿ ದಿನೇಶ್ ಕುಮಾರ್ ಜತೆ ದೀಪ್ತಿ 2015ರಲ್ಲಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ದಿನೇಶ್ ವರದಕ್ಷಿಣೆ ಪಡೆದಿದ್ದರು. ಪುನಃ ವರದಕ್ಷಿಣೆ ತರುವಂತೆ ನನ್ನ ಗಂಡ ಕಿರುಕುಳ ಕೊಡುತ್ತಿದ್ದರು ಎಂದು ದೀಪ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ದಿನೇಶ್ ಕುಮಾರ್ ಹಾಗೂ ಅವರ ಸಹೋದರನ ಪತ್ನಿ ರಮ್ಯ ವಿರುದ್ಧ ದೂರು ನೀಡಿದ್ದಾರೆ.

ವರದಕ್ಷಿಣೆ ಎಂಬುದು ಸಾಮಾಜಿಕ ಪಿಡುಗಾಗಿದೆ. ಇದನ್ನು ಬೇರು ಸಮೇತ ಕಿತ್ತೆಸಯಬೇಕಿದ್ದ ಜವಾಬ್ದಾರಿಯುವ ಅಧಿಕಾರಿ ವಿರುದ್ಧವೇ ವರದಕ್ಷಿಣೆ ಕಿರುಕುಳ, ಮತ್ತು ಕೊಲೆ ಯತ್ನ ಕೇಸ್​ ದಾಖಲಾಗಿರುವುದನ್ನ ನೋಡಿದ್ರೆ ಹೆಣ್ಮಕ್ಕಳ ಮೇಲಿನ ಶೋಷಣೆಗೆ ಕೊನೆ ಎಂದು ಎಂಬ ಪ್ರಶ್ನೆ ಮೂಡಲಿದೆ. ಪೊಲೀಸ್​ ತನಿಖೆ ಬಳಿಕೆ ಸತ್ಯಾಸತ್ಯತೆ ತಿಳಿಯಲಿದೆ.