ಜಿಲ್ಲೆ

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾರವಾರದಲ್ಲಿ ಪ್ರಕರಣ ದಾಖಲು

Uttara Kannada - Subash Hegde

ಕಾರವಾರ:ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಸ್ವಮೊಟೊ ಪ್ರಕಟಣ ದಾಖಲಿಸಿಕೊಂಡಿದ್ದಾರೆ.
ಸದೃಢ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಎಂಬ ಅಭಿಯಾನದಡಿ ಜನಗಣಮನ ಬೆಸೆಯೋಣ ಎಂಬ ಬೈಕ್ ರ‍್ಯಾಲಿಯನ್ನು ಸೂಲಿಬೆಲೆ ಹಮ್ಮಿಕೊಂಡಿದ್ದಾರೆ. ಅದರ ಭಾಗವಾಗಿ ಅ.3 ರಂದು ಅವರು ಕಾರವಾರಕ್ಕೆ ಆಗಮಿಸಿದ್ದರು. ಕಡವಾಡದ ಭೋವಿವಾಡದಲ್ಲಿ ಶ್ರೀ ಆದಿ ದೇವಸ್ಥಾನದಲ್ಲಿ ಊಟ ಸ್ವೀಕರಿಸಿ ಮಾಧ್ಯಮಗಳ ಜತೆ ಮಾತನಾಡಿದ್ದರು.
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. `ಸಿದ್ದರಾಮಯ್ಯ ಅಽಕಾರಕ್ಕೆ ಬಂದಾಗ ಹಿಂದುಗಳು ಬದುಕಲು ಕಷ್ಟಸಾಧ್ಯವಾಗುತ್ತದೆ' ಎಂಬ ಅವರ ಹೇಳಿಕೆ ನೀಡಿದ್ದರು. ಅದನ್ನು ಆಧರಿಸಿ ಗ್ರಾಮೀಣ ಠಾಣೆಯಲ್ಲಿ ಸಿಎಂ ವಿರುದ್ಧ ಅವಹೇಳನ ಮಾಡಿದ್ದಾರೆ. ವೈಮನಸ್ಸು ಉಂಟುಮಾಡುವ ಹೇಳಿಕೆ ನೀಡಿದ್ದಾರೆ ಎಂದು ದೂರನ್ನು ದಾಖಲಿಸಿಕೊಳ್ಳಲಾಗಿದೆ.