ಜಿಲ್ಲೆ

ಕೆಪಿಎಂಇ ನಿಯಮ ಉಲ್ಲಂಸಿದ ಆರೋಗ್ಯ ಸಂಸ್ಥೆಗಳ ವಿರುದ್ಧ ಕ್ರಮ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆ (ಕೆಪಿಎಂಇ)ಯಲ್ಲಿನ ನಿಯಮಗಳನ್ನು ಉಲ್ಲಂಸಿರುವ 12 ಆಸ್ಪತ್ರೆಗಳಿಗೆ ದಂಡ ಹಾಗೂ 3 ಸಂಸ್ಥೆಗಳ ವಿರುದ್ಧ ಎ್ಐಆರ್ ದಾಖಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಿಡಿದ್ದಾರೆ.

ವೈದ್ಯರಿಲ್ಲದೆ ಕ್ಲಿನಿಕ್ ನಡೆಸುವ ಮೂಲಕ ಕೆಪಿಎಂಇ ನಿಯಮ ಉಲ್ಲಂಸಿರುವ ನಗರದ ತಿಗಳರಪಾಳ್ಯದ ಶ್ರೀ ವಿನಾಯಕ್ ಕ್ಲಿನಿಕ್, ಜನರ ಆರೋಗ್ಯ ವಿಷಯದಲ್ಲಿ ಬೇಜವಾಬ್ದಾರಿತನ ವಹಿಸಿದ್ದಕ್ಕಾಗಿ ಎಸ್.ಸಿ.ರಸ್ತೆಯ ಕಪಾಲಿ ಥಿಯೇಟರ್ ಬಳಿ ಇರುವ ಮಧ್ಯಪಾನ ವಿಮುಕ್ತಿ ಕೇಂದ್ರ ಹಾಗೂ ಪದವಿಯಲ್ಲಿ ಮಾನ್ಯತೆ ಪಡೆಯದೆಯೇ ಆಸ್ಪತ್ರೆಯಲ್ಲಿ ರಮೇಶ್ ಎಂಬ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ಹೊಂಗಸಂದ್ರದ ಬಾಲಾಜಿ ಲೇಔಟ್‌ನ ಚೇತನ ಕ್ಲಿನಿಕ್ ವಿರುದ್ಧ ಎ್ಐಆರ್ ದಾಖಲಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗುರುವಾರ ನಡೆಸ ಸಭೆಯಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಸಿರುವ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗು ಪುನರ್ವಸತಿ ಕೇಂದ್ರಗಳು ಸೇರಿ ಒಟ್ಟು 33 ಪ್ರಕರಣಗಳು ಮಂಡನೆಯಾಗಿದ್ದು, ಈ ಪೈಕಿ 12 ಸಂಸ್ಥೆಗಳಿಂದ 6,78,595 ದಂಡ ವಿಧಿಸಲಾಗಿದ್ದು, 3 ಸಂಸ್ಥೆಗಳ ವಿರುದ್ಧ ಎ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.