ತಾವರಗೇರಾ: ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಹಾಗೂ ಪಪಂ ಸಹಯೋಗದಲ್ಲಿ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ತಂಬಾಕು ಮುಕ್ತ ಯುವ ಅಭಿಯಾನ 3.0 (ವಿಶೇಷ ಅಭಿಯಾನ 60 ದಿನಗಳು) ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಐಇಸಿ ಪ್ರಚಾರ ಹಾಗೂ ತಂಬಾಕು ಸೇವನೆ ದುಷ್ಪರಿಣಾಮಗಳು, ಕೋಟ್ಪಾ ಕಾಯ್ದೆ-2003ರ ಬಗ್ಗೆ ಮಾಹಿತಿ ಹಾಗೂ ತಂಬಾಕು ತ್ಯಜಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕೋಟ್ಪಾ-2003 ಕಾಯ್ದೆ ಉಲ್ಲಂಘಿಸಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿ, ಪಾನ್‌ಶಾಪ್ ಮತ್ತು ಬಾರ್ ಮಾಲೀಕರಿಗೆ ದಂಡ ವಿಧಿಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತಂಡದ ಸಲಹೆಗಾರ ಸಂಗಪ್ಪ ಮಂಟಗೇರಿ, ಸಮಾಜಿಕ ಕಾರ್ಯಕರ್ತೆ ಸರಸ್ವತಿ, ಪಪಂ ಮುಖ್ಯಾಧಿಕಾರಿ ಮಹೇಶ್ ಅಂಗಡಿ, ಆರೋಗ್ಯ ಇಲಾಖೆ ಹಿರಿಯ ಸಂರಕ್ಷಣಾಧಿಕಾರಿ ಶಂಕ್ರಮ್ಮ, ಸಿಬ್ಬಂದಿ ಇತರರಿದ್ದರು.