ಜಿಲ್ಲೆ

ಸ್ವಚ್ಛತೆ ಕಾಪಾಡದ ಹೋಟೆಲ್​, ಅಂಗಡಿಗೆ ದಂಡ

ಎನ್.ವೆಂಕಟೇಶ್

ಗೌರಿಬಿದನೂರು: ಸ್ವಚ್ಛತೆ ಕಾಪಾಡದ ಹೋಟೆಲ್​ ಹಾಗೂ ಅಂಗಡಿಗಳಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ನಗರಸಭೆ ಆಯುಕ್ತ ಕೆ.ಜಿ.ರಮೇಶ್​ ಸೂಚನೆ ಮೇರೆಗೆ ಆರೋಗ್ಯ ವಿಭಾಗದ ಸಿಬ್ಬಂದಿ ಹೋಟೆಲ್​ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಈ ವೇಳೆ ನೈರ್ಮಲ್ಯ ಕಾಪಾಡದವರಿಗೆ ಒಟ್ಟು 2200 ರೂ. ದಂಡ ವಿಧಿಸಲಾಯಿತು. ಆರೋಗ್ಯ ನಿರೀಕ್ಷಕ ನವೀನ್​ ಮಾತನಾಡಿ, ಗ್ರಾಹಕರ ಆರೋಗ್ಯ ದೃಷ್ಟಿಯಲ್ಲಿರಿಸಿಕೊಂಡು ಹೋಟೆಲ್​ ಮಾಲೀಕರು ಸ್ವಚ್ಛತೆ, ಆಹಾರ ಪದಾರ್ಥಗಳಲ್ಲಿ ಶುಚಿತ್ವ ಕಾಪಾಡಬೇಕು.ನಿಷೇಧಿತ ಪ್ಲಾಸ್ಟಿಕ್​ ಬಳಕೆ ಮಾಡಬಾರದು. ನಗರಸಭೆ ನಿಯಮ ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.ಕೊಳೆತ ತರಕಾರಿ, ಅವಧಿ ಮೀರಿದ ಧಾನ್ಯ, ಕೃತಕ ಬಣ್ಣ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಅವುಗಳ ಪದಾರ್ಥಗಳಲ್ಲಿ ಬಳಸಬಾರದು. ದೂರು ಕೇಳಿ ಬಂದಲ್ಲಿ ಪರವಾನಗಿ ರದ್ದು ಸೇರಿ ಕ್ರಮ ಜರುಗಿಸಲಾಗುವುದು ಎಂದರು. ಪರಿಸರ ಅಭಿಯಂತ ಕೆ.ಜಿ.ಶಿವಶಂಕರ್​, ಆರೋಗ್ಯ ನಿರೀಕ್ಷಕ ನವೀನ್​, ಹಿರಿಯ ಆರೋಗ್ಯ ನಿರೀಕ್ಷಕ ಸಣ್ಣಮೀರ್​, ಕಿರಿಯ ಆರೋಗ್ಯ ನಿರೀಕ್ಷಕ ಸುಹೈಲ್​ ಇದ್ದರು.