ರಾಯಚೂರು ಆಟೋ ಚಾಲಕರ ಮೇಲಿನ ದೂರುಗಳು ಹೆಚ್ಚಾದ ಹಿನ್ನೆಲೆ ಸಂಚಾರಿ ಠಾಣೆ ಪೊಲೀಸರು ಹಾಗೂ ಆರ್‌ಟಿಓ ಅಽಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ, ಸಂಚಾರಿ ನಿಯಮ ಉಲ್ಲಂöಸಿದ ಆಟೋಚಾಲಕರಿಗೆ ದಂಡ ವಿಽಸಿದ ಘಟನೆ ಬುಧವಾರ ಜರುಗಿತು.
ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಆಟೋ ರಿಕ್ಷಾಗಳ ತಪಾಸಣೆ ನಡೆಸಿದ ಅಽಕಾರಿಗಳು ಸಂಚಾರ ನಿಯಮ ಪಾಲನೆ ಮಾಡುವಂತೆ ಆಟೋ ಚಾಲಕರಿಗೆ ಅಽಕಾರಿಗಳು ತರಾಟೆಗೆ ತೆಗೆದುಕೊಂಡು ದಾಖಲೆಗಳನ್ನು ಪರಿಶೀಲನೆ ಮಾಡಿ ದಂಡ ವಿಽಸಿ ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸುವಂತೆ ಚಾಲಕರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಆರ್‌ಟಿಓ ರಾಕೇಶï ,ಸಂಚಾರಿ ಪಿಎಸ್‌ಈ ವೆಂಕಟೇಶ,ಮಹಾದೇವಪ್ಪ ಸೇರಿದಂತೆ ಅನೇಕರು ಇದ್ದರು.