ಜಿಲ್ಲೆ

ಖಾನಾವಳಿ, ಹೋಟೆಲ್‌ಗೆ ದಂಡ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಸಿ ಕಸ, ಒಣ ಕಸವನ್ನು ವಿಂಗಡಿಸದೆ ಆಟೋ ಟಿಪ್ಪರ್‌ಗೆ ನೀಡಿದ ಖಾನಾವಳಿ ಹಾಗೂ ಹೋಟೆಲ್‌ಗೆ ಪಾಲಿಕೆ ಅಧಿಕಾರಿಗಳು ತಲಾ 500 ರೂಪಾಯಿ ದಂಡ ವಿಧಿಸಿದ್ದಾರೆ.
ನಗರದ ಮರಾಠಾ ಕಾಲನಿಯ ಮಲ್ಲಿಕಾರ್ಜುನ ಖಾನಾವಳಿ ಹಾಗೂ ಕೆಸಿಡಿ ವೃತ್ತದ ಶಿವಸಾಗರ ಹೋಟೆಲ್‌ಗೆ ದಂಡ ವಿಧಿಸಲಾಗಿದೆ. ಹೋಟೆಲ್‌ನವರು ಪಾಲಿಕೆಯ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳ ಅನ್ವಯ ಕಸ ವಿಂಗಡಣೆ ಮಾಡದೆ ಆಟೋ ಟಿಪ್ಪರ್‌ಗೆ ನೀಡಿದ್ದರು.
ಕಾರ್ಯಾಚರಣೆಯಲ್ಲಿ ವಲಯ ಕಚೇರಿ 3ರ ಹಿರಿಯ ಆರೋಗ್ಯ ನಿರೀಕ್ಷಕ ಮಧುಕೇಶ್ವರ ರಾಯ್ಕರ್, ಕಿರಿಯ ಆರೋಗ್ಯ ನಿರೀಕ್ಷಕ ಯೂನಿಸ್ ಖಾಜಿ ಹಾಗೂ ಸೂಪರ್‌ವೈಸರ್ ಭಾಗವಹಿಸಿದ್ದರು. ಅಽಕಾರಿಗಳ ಕಾರ್ಯಕ್ಕೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಣೆ ಮಾಡಿ ಕಸದ ಗಾಡಿಗೆ ನೀಡಬೇಕು ಎಂದು ತಿಳಿಸಿದ್ದಾರೆ.