ಜಿಲ್ಲೆ

ಲಲಿತ ಕಲೆಗೆ ಪ್ರೋತ್ಸಾಹ ಅಗತ್ಯ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ನಿತ್ಯ ಬದುಕಿನಲ್ಲಿ ಮೇಳೈಸಿದ ಲಲಿತ ಕಲೆಗಳತ್ತ ಸಮಾಜ ಹಾಗೂ ಸರ್ಕಾರ ಪ್ರೋತ್ಸಾಹ ನೀಡುವುದರಿಂದ ಅವುಗಳ ಸಮರ್ಪಕ ಬೆಳವಣಿಗೆ ಸಾಧ್ಯ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಶಾಂತಣ್ಣ ಕಡಿವಾಲ ಹೇಳಿದರು.

ಶ್ರೇಯಾ ಜನ ಸೇವಾ ಪೌಂಡೇಶನ್ ಚಿಂತನ ವೇದಿಕೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜೊ್ಯೕತ್ಸವದ ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರಾದ ರಾಧಿಕಾ ಬೇವಿನಕಟ್ಟಿ ಹಾಗೂ ಸುನಂದ ಹೊಸಪೇಟಿ ಅವರಿಗೆ ‘ ಜಯಶ್ರೀ ಸಮ್ಮಾನ ಗೌರವ ಪ್ರಶಸ್ತಿ’ ನೀಡಿ, ಸನ್ಮಾನಿಸಲಾಯಿತು.

ಗಣ್ಯರಾದ ಮಾಳಪ್ಪ ಗೌಡ್ರು, ಸಿ.ಎಸ್. ಪಾಟೀಲ, ಆರ್.ಎಂ. ಹಿರೇಮಠ ಅತಿಥಿಗಳಾಗಿದ್ದರು. ವಿ.ಎಂ. ಹಿರೇಮಠ, ಚನ್ನಬಸಪ್ಪ ಧಾರವಾಡ ಶೆಟ್ರು, ಶಿವಾನಂದ ಬೆಂಗೇರಿ, ಮಾರುತಿ ಜಾಧವ, ಸುಮಂಗಲ ಹಿರೇಮಠ, ಶಕುಂತಲಾ ಪಾಟೀಲ, ಸರೋಜಾ ಹಿರೇಮಠ, ಅನುಪಮ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.

ಫೌಂಡೇಶನ್ ಅಧ್ಯಕ್ಷ ವಿ.ಜಿ. ಪಾಟೀಲ ಸ್ವಾಗತಿಸಿದರು. ಜೀವಿ ಬಳಗದ ಅಧ್ಯಕ್ಷ ಗದ್ಗಯ್ಯ ಹಿರೇಮಠ ನಿರೂಪಿಸಿದರು. ಬಸವರಾಜ ಸುಳ್ಳದ ವಂದಿಸಿದರು.