ಜಿಲ್ಲೆ

ಪೊಲೀಸ್ ವಾಹನಕ್ಕೂ ದಂಡ

ಸುನಿಲ್ ಪೊನ್ನೇಟಿ

ಮಡಿಕೇರಿ:

ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೂ ದಂಡ ವಿಧಿಸುವ ಮೂಲಕ ಕಾನೂನು ಎಲ್ಲರಿಗೂ ಒಂದೇ ಎನ್ನುವ ಸಂದೇಶವನ್ನು ಮಡಿಕೇರಿ ಸಂಚಾರಿ ಪೊಲೀಸರು ರವಾನಿಸಿದ್ದಾರೆ.

ಕೆಎ02ಜಿ1815 ನೋಂದಣಿ ಸಂಖ್ಯೆಯ ಮಹಿಳಾ ಸಹಾಯವಾಣಿ ವಾಹನವನ್ನು (ಪಿಂಕ್ ಗಸ್ತು ವಾಹನ) ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿನ ಏಕಮುಖ ರಸ್ತೆಯಲ್ಲಿನ ನೋ ಪಾರ್ಕಿಂಗ್ ಸ್ಥಳದಲ್ಲಿ ಗುರುವಾರ ನಿಲ್ಲಿಸಿಸಲಾಗಿತ್ತು.

ಇದನ್ನು ಗಮನಿಸಿದ ಮಡಿಕೇರಿ ಟ್ರಾಫಿಕ್ ಪೊಲೀಸರು ಈ ವಾಹನದ ಚಾಲಕ ಜಯಶಂಕರ್ ಎಂಬವರಿಗೆ 500 ರೂ. ದಂಡ ಹಾಕಿದ್ದಾರೆ. ಸಂಚಾರಿ ಪೊಲೀಸರ ಕರ್ತವ್ಯ ನಿಷ್ಠೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.