ಹೂವಿನಹಡಗಲಿ ಪಿಎಸ್‌ಐ ವಿಜಯಕೃಷ್ಣ ಅವರಿಗೆ ಬ್ಲಾಕ್ ಕಾಂಗ್ರೆಸ್‌ನಿಂದ ದೂರು ನೀಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಹನುಮಂತಪ್ಪ, ಎ.ಕೊಟ್ರೇಶ, ಜಿಪಂ ಮಾಜಿ ಸದಸ್ಯ ವಿಜಯಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಹಾಲೇಶ ಹಾಗೂ ಕಾಂಗ್ರೆಸ್ ಪುರಸಭೆ ಸದಸ್ಯರು ಇದ್ದರು. 
ಜಿಲ್ಲೆ

ಪಕ್ಷದ ಪುರಸಭೆ ಸದಸ್ಯರನ್ನು ಹುಡುಕಿಕೊಡಿ

ಹೂವಿನಹಡಗಲಿ: ಪುರಸಭೆ ಕಾಂಗ್ರೆಸ್ ಸದಸ್ಯರನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಶನಿವಾರ ದೂರು ಸಲ್ಲಿಸಲಾಯಿತು.

ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಜ.30 ರಂದು ಚುನಾವಣೆ ನಿಗಧಿಯಾಗಿದ್ದು, ತಮ್ಮ ಪಕ್ಷದ ಬಿ ಾರ್ಮ ಹಾಗೂ ಚಿನ್ಹೆಯೊಂದಿಗೆ ಪುರಸಭೆ ಸದಸ್ಯರಾದ ಐಗೋಳ ಸುರೇಶ, ಗಂಟಿ ಜಮಾಲ್ ಬೀ, ಅಂಗಡಿ ವಿಶಾಲಾಕ್ಷಮ್ಮ, ಅರಣಿ ರಫಿ, ಚಂದ್ರನಾಯ್ಕ, ಸರ್ಜಪ್ಪನವರ ಶಫಿ ಇವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಹಿನ್ನೆಲೆಯಲ್ಲಿ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರು ಮತ್ತು ಇತರೆ ಮುಖಂಡರು ಸಂಪರ್ಕಿಸಿದಾಗ ಸಂಪರ್ಕಕ್ಕೆ ದೊರಕುತ್ತಿಲ್ಲ. ಎರಡೂ ಸ್ಥಾನಗಳ ಅಭ್ಯರ್ಥಿಗಳ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷದ ಸದಸ್ಯರು ಮತಚಲಾಯಿಸುವ ಅವಶ್ಯಕತೆ ಇದೆ.

ಚುನಾವಣೆಯಲ್ಲಿ ಅವರ ಮತದಾನ ಬಹು ಮುಖ್ಯವಾಗಿದ್ದು ಅವರನ್ನು ಹುಡುಕಿಕೊಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಹನುಮಂತಪ್ಪ, ಎ.ಕೊಟ್ರೇಶ್ ಪಟ್ಟಣದ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.