ಮಡಿಕೇರಿ: ಎರಡೂ ನೇತ್ರಗಳ ದಷ್ಟಿಯನ್ನು ಕಳೆದುಕೊಂಡಿದ್ದ ತರುಣೇಶ್ ಎಂಬುವವರಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ನಗರದ ಶಿಶುಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಕಾರ್ಯದರ್ಶಿ ಲಲಿತಾ ರಾಘವನ್, ಸದಸ್ಯೆಯರಾದ ಶಫಾಲಿ ರೈ, ಉಮಾಗೌರಿ, ಮಲ್ಲಿಗೆ ಪೈ,ರಾಧಿಕಾ ವಿಶ್ವನಾಥ್, ತೆಕ್ಕಡೆ ಗುಲಾಬಿ ಜನಾರ್ಧನ್ ಹಾಜರಿದ್ದರು.