ಜಿಲ್ಲೆ

ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಗೆ ಅಂತಿಮ ನಮನ

ಸುಳ್ಯ: ಉಬರಡ್ಕ ಸೂಂತೋಡು ಬಳಿ ಸ್ಕೂಟಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಶುಕ್ರವಾರ ಅಪಘಾತ ಸಂಭವಿಸಿ ಮೃತಪಟ್ಟಿದ್ದ ವಿದ್ಯಾರ್ಥಿನಿ ರಚನಾ ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ನಗರದ ಯುವಜನ ಸಂಯುಕ್ತ ಮಂಡಳಿಯ ವೇದಿಕೆಯಲ್ಲಿ ಶನಿವಾರ ಅವಕಾಶ ಕಲ್ಪಿಸಲಾಗಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಕಾಲೇಜಿನ ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ವಿದ್ಯಾರ್ಥಿನಿಗೆ ಅಂತಿಮ ನಮನ ಸಲ್ಲಿಸಿದರು.

ರಚನಾರ ಉಪನ್ಯಾಸಕರು, ಸಹಪಾಠಿಗಳು, ಕುಟುಂಬಿಕರು ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು. ಬಳಿಕ ಮೃತದೇಹವನ್ನು ಕಾಡುತೋಟ ಮನೆಗೆ ಕೊಂಡೊಯ್ಯಲಾಯಿತು.

ಸ್ಕೂಟಿಯಲ್ಲಿ ಹಿಂಬದಿ ಸವಾರೆಯಾಗಿದ್ದ ಮೃತ ರಚನಾಳ ಸಹೋದರಿ ಸಹನಾ ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಮನೆಗೆ ಆಗಮಿಸಿ ಅಕ್ಕನಿಗಾಗಿ ಕಂಬನಿಗರೆದು ವಿದಾಯ ಕೋರಿದರು.