ಜಿಲ್ಲೆ

ಕಾರವಾರದವರು ನಟಿಸಿದ ಕಿರಿಕ್ ಚಲನಚಿತ್ರ ಪ್ರದರ್ಶನ ಜೂ.15 ರಿಂದ

Uttara Kannada - Subash Hegde

ಕಾರವಾರ: ನಗರದಲ್ಲಿ ಚಿತ್ರೀಕರಣಗೊಂಡಿರುವ ಸ್ಥಳೀಯ ಕಲಾವಿದರು ನಟಿಸಿರುವ "ಕಿರಿಕ್‌" ಚಲನ ಚಿತ್ರ ಕಾರವಾರದಲ್ಲಿ ಜೂನ್ 15 ರಂದು ಬಿಡುಗಡೆಯಾಗಲಿದೆ.

ಚಿತ್ರ ತಂಡದ ಸದಸ್ಯರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ನಾಗತಿಹಳ್ಳಿ ಗಂಗಾಧರ ಅವರ ನಿರ್ದೇಶನದ ಚಿತ್ರವು ಈಗಾಗಲೇ ರಾಜ್ಯದ ವಿವಿಧ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿ ನಾಲ್ಕನೇ ವಾರ ಚಿತ್ರ ವಿವಿಧ ಚಿತ್ರ ಮಂದಿರಗಳಲ್ಲಿ ಓಡುತ್ತಿದೆ ಎಂದರು.

ಕಾರವಾರದ ಕಲ್ಪನಾರಷ್ಮಿ ಕಲಾ ಲೋಕ ಸಂಸ್ಥೆಯ ಬಿ.ಎನ್.ಸೂರ್ಯಪ್ರಕಾಶ ವಿಲನ್ ರೋಲ್ ನಲ್ಲಿ ನಟಿಸಿದ್ದಾರೆ. ಅಲ್ಲದೇ 8 ಜನ ಸ್ಥಳೀಯ ಕಲಾವಿದರು ಇದ್ದಾರೆ. ಕಾರವಾರದ ಟ್ಯಾಗೋರ್ ಕಡಲ ತೀರ ಹೊನ್ನಾವರ, ಸದಾಶಿವಗಡ, ಹೊನ್ನಾವರ ಹೀಗೆ ವಿವಿಧೆಡೆ ಚಿತ್ರ ಶೂಟಿಂಗ್ ನಡೇದಿತ್ತು ಎಂದು ಚಿತ್ರ ತಂಡ ವಿವರಿಸಿದೆ.

ನಾಗರಾಜ ಎಸ್.‌ಅವರ ನಿರ್ಮಾಣದಲ್ಲಿ ನಾಗತಿಹಳ್ಳಿ ಗಂಗಾಧರ ಅವರು ಚಿತ್ರ ನಿರ್ದೇಶನ ಮಾಡಿದ್ದಾರೆ. ಕೀರ್ತಿ ವರ್ಧನ ಅವರು -ಕತೆ, ಚಿತ್ರಕತೆ ಛಾಯಾಗ್ರಾಹಣ ಮಾಡಿದ್ದು, ರವಿ ಶೆಟ್ಟಿ ನಾಯಕ ನಟರಾಗಿ, ಪೂಜಾ ರಾಮಚಂದ್ರ ಅವರು ನಾಯಕ ನಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.