ಮೈಸೂರು: ದಸರಾ ಚಲನಚಿತ್ರೋತ್ಸವ ಪ್ರಯುಕ್ತ ಕಿರುಚಿತ್ರ ಸ್ಫರ್ಧೆ ಹಮ್ಮಿಕೊಳ್ಳಲಾಗಿದೆ. ಕಿರುಚಿತ್ರದ ಒಟ್ಟು ಅವಧಿಯು (ಶೀರ್ಷಿಕೆಯೂ ಸೇರಿದಂತೆ) 5 ನಿಮಿಷಗಳ ಒಳಗೆ ಇರಬೇಕು. ಒಬ್ಬರು ಎಷ್ಟು ಬೇಕಾದರೂ ಕಿರುಚಿತ್ರಗಳನ್ನು ಸಲ್ಲಿಸಬಹುದು.
ಕಿರುಚಿತ್ರದಲ್ಲಿ ಯಾವುದೇ ಡೌನ್‌ಲೋಡ್ ಮಾಡಿದ ಸ್ಥಿರಚಿತ್ರ, ದೃಶ್ಯ, ಹಾಡು ಅಥವಾ ಹಿನ್ನೆಲೆ ಸಂಗೀತ ಉಪಯೋಗಿಸಿದ್ದಲ್ಲಿ, ಕೃತಿಚೌರ್ಯ ಅಥವಾ ಕೃತಿಸ್ವಾಮ್ಯ ಸಮಸ್ಯೆಗೆ ಒಳಪಡುವಂತಿದ್ದರೆ ಅಂತಹ ಕಿರುಚಿತ್ರಗಳನ್ನು ತಿರಸ್ಕರಿಸಲಾಗುವುದು. ಕನ್ನಡೇತರ ಭಾಷಾ ಕಿರುಚಿತ್ರಗಳು ಕಡ್ಡಾಯವಾಗಿ ಸಬ್ ಟೈಟಲ್ ಹೊಂದಿರಬೇಕು. ಈ ಲಿಂಕ್ ಠಿಠಿ://ಚಿಜಿಠಿ.್ಝ/3ಕ್ಗಿಓಟಓ ಕ್ಲಿಕ್ಕಿಸಿದಾಗ ಕಂಡುಬರುವ ಗೂಗಲ್ ಅರ್ಜಿ ನಮೂನೆಯಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ಅಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ 100 ರೂ. ಶುಲ್ಕ ಪಾವತಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಕಿರುಚಿತ್ರವನ್ನು ಎಂಪಿ4 ಮಾದರಿಯಲ್ಲಿ ಗೂಗಲ್ ಡ್ರೈವ್ ಅಥವಾ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿ ಅದರ ಲಿಂಕ್‌ಅನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕು. ಅತ್ಯುತ್ತಮ 5 ಕಿರುಚಿತ್ರಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಉಳಿದ ಉಳಿದ ಕಿರುಚಿತ್ರಗಳಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರ ನೀಡಲಾಗುವುದು. ಕಿರುಚಿತ್ರಗಳನ್ನು ಸಲ್ಲಿಸಲು ಸೆ.12 ಕಡೆಯ ದಿನ.