ಬಸವಣ್ಣನ ಐಕ್ಯ ಮಂಟಪ ಬಳಿ ಕೃಷ್ಣಾ, ಮಲಪ್ರಭಾ ನದಿಯ ಒಡಲು ತುಂಬಿಕೊಂಡಿರುವುದು. 
ಜಿಲ್ಲೆ

ತುಂಬಿದ ಕೃಷ್ಣೆ, ಮಲಪ್ರಭೆ ಒಡಲು

Vijayapura - Desk - Gurappa Lokuri

ಕೂಡಲಸಂಗಮ: ಮಲಪ್ರಭಾ, ಕೃಷ್ಣಾ ನದಿಯ ಅಚ್ಚುಕಟ್ಟಿನ ಪ್ರದೇಶದಲ್ಲಿ 10 ದಿನಗಳಿಂದ ಸುರಿದ ಮಳೆಯಿಂದ ನಾರಾಯಣಪುರ ಜಲಾಶಯ ಹಿನ್ನೀರಿನ ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪ ಬಳಿ ನೀರಿನ ಜಲರಾಶಿ ವಿಶಾಲವಾಗಿ ಹರಡಿಕೊಂಡಿದೆ.

ಮೂರು ತಿಂಗಳಿಂದ ಬರಿದಾಗಿದ್ದ ಕೃಷ್ಣಾ, ಮಲಪ್ರಭಾ ನದಿಯ ಒಡಲು ಹತ್ತು ದಿನಗಳದಲ್ಲಿ ತುಂಬಿಕೊಂಡು ಪುನಾಃ ಜೀವಕಳೆ ಪಡೆದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ನಾಲ್ಕು ದಿನಗಳಿಂದ ತಂಡೋಪತಂಡವಾಗಿ ಪ್ರವಾಸಿಗರು ಸುಕ್ಷೇತ್ರಕ್ಕೆ ಆಗಮಿಸಿ ನದಿಯ ವಿಹಂಗಮ ದೃಶ್ಯ ನೋಡಿ ಸಂಭ್ರಮಿಸುವರು.

ಪ್ರತಿ ವರ್ಷ ಏಪ್ರಿಲ್‌ದಿಂದ ಜೂನ್ ಅಂತ್ಯದವರೆಗ ನದಿಯ ಒಡಲು ಬರಿದಾಗುತ್ತಿತ್ತು. ಈ ವರ್ಷ ಏಪ್ರಿಲ್ ಮೊದಲ ವಾರ ಇಳಿಮುಖಗೊಂಡು ಜೂನ್ ಎರಡನೇ ವಾರಕ್ಕೆ ಮತ್ತೆ ತುಂಬಿಕೊಂಡಿದೆ.