ಜಿಲ್ಲೆ

ಸಚಿತಾ ರೈ ವಿರುದ್ಧ ಮತ್ತೆ ಕೇಸು ದಾಖಲು : 15ಕ್ಕೆ ಏರಿದ ಪ್ರಕರಣ ಸಂಖ್ಯೆ

ಕಾಸರಗೋಡು: ಡಿವೈಎಫ್‌ಐ ಮಾಜಿ ನಾಯಕಿ ಪುತ್ತಿಗೆ ಪಂಚಾಯಿತಿ ಬಾಡೂರು ಎಎಲ್‌ಪಿ ಶಾಲಾ ಶಿಕ್ಷಕಿ ಸಚಿತಾ ರೈ(27) ವಿರುದ್ಧ ಮತ್ತೆ ಎರಡು ಕೇಸು ದಾಖಲಾಗಿದ್ದು, ಪ್ರಕರಣ ಸಂಖ್ಯೆ 15ಕ್ಕೆ ಏರಿದೆ. ಎಣ್ಮಕಜೆ ಪಂಚಾಯಿತಿಯ ಪೆರ್ಲ ಸನಿಹದ ಬೆದ್ರಂಪಳ್ಳ ನಿವಾಸಿ ಸಂದೀಪ್, ಎಣ್ಮಕಜೆ ನಯನ ಕುಮಾರಿ ಅವರ ದೂರಿನ ಮೇರೆಗೆ ಬದಿಯಡ್ಕ ಠಾಣೆ ಪೊಲೀಸರು ಸಚಿತಾ ರೈ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಕರ್ನಾಟಕ ಲೋಕೋಪಯೋಗಿ ಇಲಾಖೆ, ಪೆಟ್ರೋಲಿಯಂ ಇಲಾಖೆಯಲ್ಲಿ ಕೆಲಸ ದೊರಕಿಸಿಕೊಡುವ ಭರವಸೆಯೊಂದಿಗೆ ತನ್ನಿಂದ 12,83,500 ರೂ. ನಗದು ಸಚಿತಾ ರೈ ಪಡೆದುಕೊಂಡಿರುವುದಾಗಿ ಸಂದೀಪ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗ ತೆಗೆಸಿಕೊಡುವ ಭರವಸೆಯೊಂದಿಗೆ ತನ್ನಿಂದ 13,90,000 ರೂ. ಪಡೆದು ವಂಚಿಸಿರುವುದಾಗಿ ನಯನ ಕುಮಾರಿ ಬದಿಯಡ್ಕ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.