ಜಿಲ್ಲೆ

ಬಾಂಬೆ ಸರ್ಕಸ್ ವಿರುದ್ಧ ಪ್ರಕರಣ ದಾಖಲು

reportermys

ಮೈಸೂರು: ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ (ಎಡಬ್ಲುೃಬಿಐ)ನಲ್ಲಿ ನೋಂದಾಯಿಸದ ಸರ್ಕಸ್ ಆಟಗಳನ್ನು ಪ್ರದರ್ಶಿಸಲು ನಾಯಿಗಳು ಮತ್ತು ಪಕ್ಷಿಗಳನ್ನು ಬಳಸಲಾಗುತ್ತಿದೆ ಎಂಬ ಆರೋಪದಡಿ ನಗರದ ಕಾರಂಜಿ ಕೆರೆ ಆವರಣದಲ್ಲಿ ನಡೆಯುತ್ತಿರುವ ಗ್ರೇಟ್ ಬಾಂಬೆ ಸರ್ಕಸ್ ವಿರುದ್ಧ ಪ್ರಕರಣ ದಾಖಲಾಗಿದೆ.


ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(ಪೇಟಾ) ಇಂಡಿಯಾ ನೀಡಿದ ದೂರಿನ ಮೇರೆಗೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯಿಗಳು ರಿಂಗ್‌ಗಳ ಅಂಚಿನಲ್ಲಿ ತಮ್ಮ ಮುಂಭಾಗದ ಕಾಲುಗಳ ಮೇಲೆ ನಡೆಯುವಂತೆ ಮಾಡುವುದು, ಪಕ್ಷಿಗಳು ಒಂದು ಚಿಕ್ಕ ಬಂಡಿಯನ್ನು ಎಳೆಯುವಂತೆ ಮಾಡುವುದಕ್ಕೆ ಎಡಬ್ಲುೃಬಿಐನಲ್ಲಿ ನೋಂದಾಯಿಸಲಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನಡಿ ಪ್ರಕರಣ ದಾಖಲಾಗಿದೆ.