ಜಿಲ್ಲೆ

ಸೌಲಭ್ಯ ಪಡೆಯಲು ಹೋರಾಟ ಅನಿವಾರ್ಯ

ವಿವೇಕಾನಂದ ದಾಸನಕೊಪ್ಪ

ಸವಣೂರ: ಸಂಘಟನೆಯೊಂದಿಗೆ ಹೋರಾಟ ಮನೋಭಾವ ಕಾರ್ವಿುಕರಲ್ಲಿ ಮೂಡಿದಲ್ಲಿ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಫೆಡರೇಷನ್ (ಸಿಡಬ್ಲೂಎಫ್​ಐ) ದಾವಣಗೆರೆ ಜಿಲ್ಲಾಧ್ಯಕ್ಷ ಆನಂದರಾಜ್ ಹೇಳಿದರು.

ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಯಾವ ಸರ್ಕಾರವೂ ಕಾರ್ವಿುಕರಿಗೆ ಪುಕ್ಕಟೆ ಯೋಜನೆಗಳನ್ನು ನೀಡುತ್ತಿಲ್ಲ. ಕಾರ್ವಿುಕರ ದುಡಿಮೆಯಲ್ಲಿ ಪಡೆಯುತ್ತಿರುವ ಸೆಸ್ ಹಣದಲ್ಲಿಯೇ ಕೊಳ್ಳೆ ಹೊಡಿಯುತ್ತಿದ್ದಾರೆ. ಕಾರ್ವಿುಕರ ಮಕ್ಕಳಿಗೆ ನೀಡಬೇಕಾಗಿರುವ ಶಿಷ್ಯವೇತನ ಹಲವು ವರ್ಷಗಳಿಂದ ನೀಡುತ್ತಿಲ್ಲ. ಸಮಾವೇಶಕ್ಕೆ ಕಾರ್ವಿುಕ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿದರೂ ಆಗಮಿಸಿಲ್ಲ. ಸರ್ಕಾರದ 14 ಯೋಜನೆಗಳನ್ನು ಸಮರ್ಪಕವಾಗಿ ಕಾರ್ವಿುಕರಿಗೆ ತಲುಪಿಸಬೇಕು. ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದರು.

ರಾಜ್ಯ ಉಪಾಧ್ಯಕ್ಷ ಖಾಸೀಂ ಸರ್ದಾರ್, ಸಿಡಬ್ಲೂಎಫ್​ಐ ರಾಜ್ಯ ಕಾರ್ಯದರ್ಶಿ ಬಸವರಾಜ ಕೆ., ಸಾಹಿತಿ ಬಸವರಾಜ ರ್ಬಾ ಮಾತನಾಡಿದರು. ಸಿಡಬ್ಲೂಎಫ್​ಐ ತಾಲೂಕು ಪ್ರಮುಖ ಚನ್ನವೀರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳಾದ ಸಲೀಂಬೇಗ ಕಿಲ್ಲೇದಾರ್, ಗೌಸಮೀಯಾ ಮುಲ್ಲಾ, ರಿಯಾಜ್​ಅಹ್ಮದ ಮರಪಾಜಿ, ಮೀನಾಕ್ಷಿ ಸೊರಟೂರ, ಲಲಿತಾ ಬಳ್ಳಾರಿ, ಗಂಗಮ್ಮ ಬಳ್ಳಾರಿ, ನಿಂಗನಗೌಡ ಪಾಟೀಲ, ಸಾಬೀರ ಕಡಕೋಳ, ಖಾಸೀಮಸಾಬ್ ನದಾಫ್, ದುದ್ದುಸಾಬ್ ಹಣಗಿ, ಇರ್ಷಾದ್ ಮುನ್ಷಿ, ಬಾಷಾ ನೀರಮಣಿ, ಅತಾವುಲ್ಲಾ ನಾಯಕ್ ಇತರರಿದ್ದರು. ರಿಯಾಜ್​ಅಹ್ಮದ ಕೋಟೆನವರ ಹಾಗೂ ಸಲ್ಮಾನ್ ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.