ಜಿಲ್ಲೆ

ಪರಸ್ಪರ ತಲ್ವಾರ್‌ನಿಂದ ಹೊಡೆದಾಟ

ಮರಿದೇವ ಹೂಗಾರ

ಹುಬ್ಬಳ್ಳಿ: ಹಣ ಸೇರಿ ಕೆಲ ವೈಯಕ್ತಿಕ ವಿಷಯದಿಂದ ಸ್ನೇಹಿತರಿಬ್ಬರು ಪರಸ್ಪರ ತಲ್ವಾರ್‌ನಿಂದ ಹೊಡೆದಾಡಿಕೊಂಡ ಘಟನೆ ಶನಿವಾರ ಸಂಜೆ ತಾಲೂಕಿನ ವರೂರ ಬಳಿ ನಡೆದಿದೆ.
ಘಟನೆಯಲ್ಲಿ ಬಿ. ಅರಳಿಕಟ್ಟಿ ಗ್ರಾಮದವರಾದ ಜುಬೇರ ಹಾಗೂ ಬಿಡನಾಳ ಮೂಲದ ಫಕ್ರುದ್ದೀನ ಗಾಯಗೊಂಡಿದ್ದಾರೆ.
ಹಣಕಾಸಿನ ವಿಷಯವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ. ಅಲ್ಲದೆ ನನ್ನ ಹೆಂಡತಿ ನನ್ನಿಂದ ದೂರವಾಗಲು ನೀನೆ ಕಾರಣವೆಂದು ಫಕ್ರುದ್ದೀನ, ಜುಬೇರ ಜತೆ ಜಗಳ ಮಾಡಿಕೊಂಡಿದ್ದಾನೆ. ವಿಕೋಪಕ್ಕೆ ಹೋದಾಗ ತಲ್ವಾರ್ ತೆಗೆದುಕೊಂಡು ಬಂದಿದ್ದ ಫಕ್ರುದ್ದೀನ, ಜುಬೇರ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಜುಬೇರ, ಅದೇ ತಲ್ವಾರ್‌ನಿಂದ ಫಕ್ರುದ್ದೀನ ತಲೆ ಮತ್ತು ್ಮುಖಕ್ಕೆ ಹೊಡೆದು ಗಾಯಗೊಳಿಸಿದ್ದಾನೆ. ಜುಬೇರ ಎಸ್‌ಡಿಎಂ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದು, ತೀವ್ರ ಗಾಯಗೊಂಡಿರುವ ಫಕ್ರುದ್ದೀನನನ್ನು ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಇಬ್ಬರೂ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.