ಮಸ್ಕಿ ತಹಸಿಲ್ ಕಚೇರಿ ಮುಂದೆ ಕರವೇ ತಾಲೂಕು ಘಟಕ ಪ್ರತಿಭಟನೆ ನಡೆಸಿತು. ತಾಲೂಕು ಅಧ್ಯಕ್ಷ ಅಶೋಕ್ ಮುರಾರಿ, ಕಾರ್ಯಕರ್ತರಾದ ಪೀರ್‌ಸಾಬ್ ಸೆಡ್ಮಿ, ಮಂಜುನಾಥ, ರಮೇಶ, ಮರಿಸ್ವಾಮಿ, ಶರಣಬಸವ, ಪ್ರದೀಪ್, ರಿಯಾಜ್, ಲಕ್ಷ್ಮಣ್ ಇತರರಿದ್ದರು. 
ಜಿಲ್ಲೆ

ಹೋರಾಟಗಾರರ ಹತ್ತಿಕ್ಕುವ ಕೆಲಸ ಸಲ್ಲದು

Kopala - Desk - Eraveni

ಮಸ್ಕಿ: ಕರವೇ (ಪ್ರವೀಣ ಶೆಟ್ಟಿ ಬಣ) ಸಿರವಾರ ತಾಲೂಕು ಅಧ್ಯಕ್ಷ ಕೆ.ರಾಘವೇಂದ್ರ ಖಾಜನಗೌಡ ವಿರುದ್ಧ ದಾಖಲಿಸಿದ ಪ್ರಕರಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ತಹಸಿಲ್ ಕಚೇರಿ ಮುಂದೆ ವೇದಿಕೆಯ ಮಸ್ಕಿ ತಾಲೂಕು ಘಟಕ ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ್‌ಗೆ ಮನವಿ ಸಲ್ಲಿಸಿತು.

ಕರವೇ ತಾಲೂಕು ಅಧ್ಯಕ್ಷ ಅಶೋಕ್ ಮುರಾರಿ ಮಾತನಾಡಿ, ಸಂಘಟನೆಗಳು ಸಮಾಜಮುಖಿ ಕಾರ್ಯಗಳು ಮಾಡುತ್ತ ಅಭಿವೃದ್ಧಿ ವಿಚಾರದಲ್ಲಿ ತೊಡಗಿರುತ್ತವೆ. ಆದರೆ, ಕೆಲ ಅಧಿಕಾರಿಗಳು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.

ವಿನಾಕಾರಣ ಅಧಿಕಾರಿಗಳು ಸಿರವಾರ ಪೊಲೀಸ್ ಠಾಣೆಯಲ್ಲಿ ಕರವೇ ತಾಲೂಕು ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಒಂದು ವಾರದೊಳಗೆ ಕೇಸ್ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಾರ್ಯಕರ್ತರಾದ ಪೀರ್‌ಸಾಬ್ ಸೆಡ್ಮಿ, ಮಂಜುನಾಥ, ರಮೇಶ, ಮರಿಸ್ವಾಮಿ, ಶರಣಬಸವ, ಪ್ರದೀಪ್, ರಿಯಾಜ್, ಲಕ್ಷ್ಮಣ್ ಇತರರಿದ್ದರು.