ಹುಬ್ಬಳ್ಳಿ: ಸಾಲದ ರೂಪದಲ್ಲಿ ಪಡೆದ 200 ರೂ. ವಾಪಸ್ ಕೊಡುವ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳವಾಗಿ ಕೊಲೆ ಯತ್ನ ಮಾಡಲಾಗಿದೆ ಎಂದು ಎರಡೂ ಕಡೆಯಿಂದ ಇಲ್ಲಿಯ ಶಹರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಅನಿಲ ಎಂಬಾತ ಪ್ರಶಾಂತನಿಂದ 200 ರೂ. ಸಾಲ ಪಡೆದಿದ್ದು, ವಾಪಸ್ ಕೊಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ.
ಅನಿಲ ಅಲಿಯಾಸ್ ಡೈಮಂಡ್ ಪೀಟರ್‌ದಾಸ, ಪರ್ಸಿ ಕಲ್ಲಿನಿಂದ ಹೊಡೆದು ನನ್ನ ಕೊಲೆಗೆ ಯತ್ನಿಸಿದ್ದಾನೆ ಎಂದು ಪ್ರಶಾಂತ ದೂರು ದಾಖಲಿಸಿದ್ದಾರೆ. ಬ್ಲೇಡ್‌ನಿಂದ ಪ್ರಶಾಂತ ನನ್ನ ಕೊಲೆಗೆ ಯತ್ನಿಸಿದ್ದಾನೆ ಎಂದುಅನಿಲ ಪೀಟರ್‌ದಾಸ ಪ್ರತಿ ದೂರು ದಾಖಲಿಸಿದ್ದಾರೆ.