ವಿಜಯವಾಣಿ ಸುದ್ದಿಜಾಲ ಮುಂಡರಗಿ
ಮುಂಡರಗಿ ಮತ್ತು ಹೂವಿನಹಡಗಲಿ ಮಾರ್ಗವಾಗಿ ಗದಗ&ಹರಪನಹಳ್ಳಿ ರೈಲು ಮಾರ್ಗ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಗದಗ&ಹರಪನಹಳ್ಳಿ ರೈಲು ಮಾರ್ಗ ರಚನೆ ಜಂಟಿ ಕ್ರಿಯಾ ಸಮಿತಿ ಹಾಗೂ ವಿವಿಧ ಸಂಟನೆಗಳ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ಅಂಚೆ ಕಚೇರಿ ಮುಂದೆ ಅಂಚೆ ಪತ್ರ ಚಳವಳಿ ಪ್ರತಿಭಟನೆ ನಡೆಸಿ ಅಂಚೆ ಕಚೇರಿ ವ್ಯವಸ್ಥಾಪಕ ಹಾಲೇಶ ವಾಮಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಗದಗ&ಹರಪನಹಳ್ಳಿ ರೈಲು ಮಾರ್ಗ ರಚನೆ ಜಂಟಿ ಕ್ರಿಯಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನವಲಗುಂದ ಮಾತನಾಡಿ, ಮುಂಡರಗಿ ಮತ್ತು ಹೂವಿನಹಡಗಲಿ ಮಾರ್ಗವಾಗಿ ಗದಗ&ಹರಪನಹಳ್ಳಿ ರೈಲು ಮಾರ್ಗ ಅನುಷ್ಠಾನಗೊಳಿಸಬೇಕು. ಹಲವು ವರ್ಷಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರ ಮಾತ್ರ ಅನುಷ್ಠಾನವನ್ನು ಮಾಡುವಲ್ಲಿ ಹಿಂದೇಟು ಹಾಕುತ್ತಿದೆ. ರೈಲು ಮಾರ್ಗ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ, ರೈಲ್ವೆ ಸಚಿವ ಅಶ್ವಿನ ವೈಷ್ಣವಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಿಎಂ ಸಿದ್ದರಾಮಯ್ಯ, ಗೃಹಮಂತ್ರಿ ಜಿ. ಪರಮೇಶ್ವರ, ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಮತ್ತು ವಿವಿಧ ರೈಲ್ವೆ ಇಲಾಖೆಗಳಿಗೆ ಹಾಗೂ ಬೋರ್ಡ್ಗಳಿಗೆ ಅಂಚೆ ಪತ್ರ ಬರೆದು ಒತ್ತಾಯಿಸಲಾಗುತ್ತಿದೆ ಎಂದರು.
ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ದೇಸಾಯಿ ಮಾತನಾಡಿ, ಗದಗ&ಹರಪನಹಳ್ಳಿ ರೈಲು ಮಾರ್ಗ ಅನುಷ್ಠಾನಗೊಳಿಸಬೇಕು ಎನ್ನುವ ನಮ್ಮ ಈ ಬೇಡಿಕೆ ಡಿ. 9 ರೊಳಗೆ ಈಡೇರಿಸದಿದ್ದರೆ ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಉತ್ತರ ಕರ್ನಾಟಕ ಪ್ರದೇಶ ರೈತ ಸಂ ಅಧ್ಯಕ್ಷ ವಿ.ಎಸ್.ಟ್ಟಿ, ಮುಂಡರಗಿ ವಿಧಾನಸಭಾ ಹೋರಾಟ ಸಮಿತಿ ಅಧ್ಯಕ್ಷ ದೇವಪ್ಪ ಇಟಗಿ, ಕಿಸಾನ ಜಾಗೃತಿ ಸಂದ ಜಿಲ್ಲಾಧ್ಯಕ್ಷ ಧ್ರುವಕುಮಾರ ಹೂಗಾರ, ಯಮನಪ್ಪ ಭಜಂತ್ರಿ, ಬಸಪ್ಪ ವಡ್ಡರ, ಪವನ್ ಚೋಪ್ರಾ, ಮೈನುದ್ದೀನ ಗರಡಿಮನಿ, ಸುರೇಶ ಕುಂಬಾರ, ಸುಭಾಷ ಕುಂಬಾರ, ನಜೀರ ಹೊಸಪೇಟಿ, ವೀರಭದ್ರಪ್ಪ ಕಬ್ಬಿಣದ ಇತರರು ಇದ್ದರು.