ಜಿಲ್ಲೆ

ವಕ್ಫ್ ವಿರುದ್ಧ ಹೋರಾಟ ನಾಳೆ

ರವಿಕುಮಾರ್ ಪಿ. ಕೆ

 ಅರಸೀಕೆರೆ ಗ್ರಾಮಾಂತರ: ವಕ್ಫ್ ಕಾನೂನು ವಿರೋಧಿ ಪ್ರತಿಭಟನೆ ಕಾರ್ಯಕ್ರಮಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಗ್ರಾಮಾಂತರ ಅಧ್ಯಕ್ಷ ವಕೀಲ ಯತೀಶ್‌ತಿಳಿಸಿದ್ದಾರೆ.

ವಕ್ಫ್ ಬೋರ್ಡ್ ಸರ್ವಾಧಿಕಾರಿಯ ನೀತಿ ಜನರ ನೆಮ್ಮದಿಯನ್ನು ಕಸಿದು ಅಭದ್ರತೆ ಸೃಷ್ಟಿಸುತ್ತಿದೆ. ಹಾಗಾಗಿ, ಈ ಕರಾಳ ಕಾನೂನನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಡಿ.16 ರಂದು ಬೆಳಗ್ಗೆ 10.30ಕ್ಕೆ ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ತಾಲೂಕಿನ ಪೂಜ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.