ಜಿಲ್ಲೆ

ಮಾದಕ ವಸ್ತು ವಿರುದ್ಧ ಹೋರಾಟ

Avinash R

ಕಾಸರಗೋಡು: ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಸಾಗಿ ಯಶಸ್ಸು ಪಡೆಯಲು ಶ್ರಮಿಸಬೇಕು. ಸಮಾಜದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ವಿದ್ಯಾರ್ಥಿಗಳು ಎಂಡಿಎಂಎ, ಗಾಂಜಾದಂತಹ ಮಾರಕ ಮಾದಕ ವ್ಯಸನದ ವಿರುದ್ಧ ಹೋರಾಡುವ ಯೋಧರಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿದರು.

ಜಿಲ್ಲಾ ಪೊಲೀಸ್ ಮುಖ್ಯಸ್ಥರ ಚೇಂಬರ್‌ಗೆ ಭೇಟಿ ನೀಡಿದ ನಾಯಮರ್‌ಮೂಲೆ ತನ್‌ಬೀಹುಲ್ ಹೈಯರ್ ಸೆಕೆಂಡರಿ ಶಾಲೆಯ ಟಿಐಎಚ್‌ಎಸ್‌ಎಸ್ ಶಾಲೆಯ ಹಿರಿಯ ಸ್ಟೂಡೆಂಟ್ ಪೊಲೀಸ್ ಕೋರ್(ಎಸ್‌ಪಿಸಿ) ಕೆಡೆಟ್‌ಗಳೊಂದಿಗೆ ಸಂವಾದ ನಡೆಸಿದರು.

ಹೆಚ್ಚುವರಿ ಎಸ್ಪಿ ಪಿ.ಬಾಲಕೃಷ್ಣನ್ ನಾಯರ್, ವಿಶೇಷ ಬ್ರಾಂಚ್ ಡಿವೈಎಸ್ಪಿ ಎಂ ಸುನೀಲ್ ಕುಮಾರ್, ಎಸ್ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಟಿ.ತಂಬಾನ್, ಸಮುದಾಯ ಪೊಲೀಸ್ ಅಧಿಕಾರಿ ಇಲ್ಯಾಸ್ ಮಾಸ್ಟರ್, ಡ್ರಿಲ್ ಬೋಧಕರಾದ ಪ್ರಶಾಂತ್ ಎನ್.ಆರ್., ಪ್ರಸೀತಾ ಟಿ.ಮತ್ತು ಯೋಜನಾ ಸಹಾಯಕ ಶ್ಯಾಮ್ ಕೃಷ್ಣನ್ ಉಪಸ್ಥಿತರಿದ್ದರು.