ಜಿಲ್ಲೆ

ಒಂದೇ ಜಿಲ್ಲೆಯ 15 ಪುರುಷರ ಸಂತಾನಶಕ್ತಿ ಹರಣ; ಸ್ವಯಂಪ್ರೇರಿತರಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗಮನಸೆಳೆದರು!

ವಿಜಯಪುರ: ಜಿಲ್ಲೆಯ 15 ಪುರುಷರು ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳಗಾಗುವ ಮೂಲಕ ಗಮನ ಸೆಳೆದಿದ್ದಾರೆ. ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪುರುಷರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಇವರು ಆಪರೇಷನ್​ಗೆ ಒಳಗಾದರು.

ಡಾ.ಗಿರೀಶ ಕುಲ್ಲೋಳ್ಳಿ, ಡಾ.ತೇಜಸ್ವೀನಿ ವಲ್ಲಭ ಹಾಗೂ ಡಾ.ಎಂ.ಬಿ.ಪಾಟೀಲ ಶಸ್ತ್ರಚಿಕಿತ್ಸಾ ತಂಡವು ಈ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಆಗಮಿಸಿದ 15 ಪುರುಷರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನೇರವೇರಿಸಿದರು.

ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಶ ಚವಾಣ್, ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಡಾ.ಟಿ.ಎ.ಹಿಟ್ನಳ್ಳಿ, ಡಾ.ಬಾಲಕೃಷ್ಣ.ಜಿ.ಕೆ, ಡಾ.ಸಂತೋಷ ಶೆಟ್ಟಿ ಮತ್ತಿತರರಿದ್ದರು.