ನಾರಾಯಣ ಗೌಡ ಬಂಧನ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಯಡೂರು ಸುರೇಂದ್ರ, ಪಟೇಲ್ ವೆಂಕಟೇಶ ಹೆಗ್ಡೆ, ಹರ್ಷೇಂದ್ರಕುಮಾರ್ ಪಡುವಳ್ಳಿ, ರವಿ, ಜ್ಯೋತಿ ದಿಲೀಪ್, ಸುರೇಶ್, ಡಾಕಮ್ಮ ಇತರರಿದ್ದರು. 
ಜಿಲ್ಲೆ

ಕರವೇ ಕಾರ್ಯಕರ್ತರ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ

Shivamogga - Desk - Vinayakumar D B

ತೀರ್ಥಹಳ್ಳಿ: ರಾಜ್ಯದಲ್ಲಿ ಕನ್ನಡವನ್ನು ಉಳಿಸಲು ಹೋರಾಟ ನಡೆಸುತ್ತಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದನ್ನು ಖಂಡಿಸಿ ತಾಲೂಕು ಕರವೇ ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕಕ್ಕೆ ಹೊರ ರಾಜ್ಯಗಳಿಂದ ಬರುವ ಅನ್ಯ ಭಾಷಿಕರಿಗೆ ಕನ್ನಡದ ಬಗ್ಗೆ ಅಸಡ್ಡೆ ಇದೆ. ಈ ಮನೋಭಾವವನ್ನು ಕರವೇ ಲಾಗಾಯ್ತಿನಿಂದ ವಿರೋಧಿಸಿಕೊಂಡು ಬಂದಿದೆ. ಸರ್ಕಾರದ ಮಾರ್ಗಸೂಚಿಯಂತೆ ನಾಮಫಲಕದಲ್ಲಿ ಶೇ.60 ಕನ್ನಡ ಬಳಸಬೇಕಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ ಎಂದು ಪ್ರತಿಭಟನಾನಿರತರು ಹೇಳಿದರು.
ಕನ್ನಡದ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ನಡೆಸಿದ ರ‌್ಯಾಲಿಯಲ್ಲಿ ಪಾಲ್ಗೊಂಡವರನ್ನು ಬಂಧಿಸಿರುವ ಪೋಲಿಸರು ಆಹಾರವನ್ನೂ ನೀಡದೇ ಬಲಾತ್ಕಾರವಾಗಿ ಕೂಡಿ ಹಾಕಿರುವುದು ಖಂಡನೀಯ. ಈ ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಥರದ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಕರವೇ ತಾಲೂಕು ಅಧ್ಯಕ್ಷ ಯಡೂರು ಸುರೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ ಹೆಗ್ಡೆ, ಹರ್ಷೇಂದ್ರಕುಮಾರ್ ಪಡುವಳ್ಳಿ, ರವಿ, ಜ್ಯೋತಿ ದಿಲೀಪ್, ಸುರೇಶ್, ಡಾಕಮ್ಮ ಇತರರಿದ್ದರು.