ಮುದ್ದೇಬಿಹಾಳ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ, ಅಹಿಂದ ಸಂಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಪಿ.ಬಿ.ಮಾತಿನ್​, ಕೆ.ಎಂ.ರಿಸಾಲ್ದರ್​, ಸಿದ್ಧನಗೌಡ ಬಿರಾದಾರ, ನಾಗಪ್ಪ ರೂಢಗಿ, ಪ್ರಚಂಡಪ್ಪ ಚಲವಾದಿ ಇತರರಿದ್ದರು. 
ಜಿಲ್ಲೆ

ಕುತಂತ್ರ ಮುಂದುವರಿದಲ್ಲಿ ತೀವ್ರ ಹೋರಾಟ

ಗಿರೀಶ ಸಗರ

ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ವಿರುದ್ಧ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ವೇದಿಕೆ, ಕುರುಬರ ಸಂ, ಹಿಂದುಳಿದ ವರ್ಗಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬೃಹತ್​ ಪ್ರತಿಭಟನೆ ನಡೆಸಲಾಯಿತು.

ಗೆಹ್ಲೋಟ್​ ಅವರ ಭಾವಚಿತ್ರಕ್ಕೆ ಚಪ್ಪಲಿ ಇಟ್ಟು, ಟಯರ್​ ಮತ್ತು ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆ ಸಂದರ್ಭ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆದಿದ್ದರಿಂದ ಕೆಲಹೊತ್ತು ಸಂಚಾರ ಸಮಸ್ಯೆ ಉಂಟಾಗಿತ್ತು. ಸಂಚಾರ ತಡೆಗಟ್ಟಿದ್ದಕ್ಕೆ ಆೇಪಿಸಿದ ಪಿಎಸ್​ಐ ಸಂಜಯ್​ ತಿಪ್ಪರಡ್ಡಿ ಹಾಗೂ ಪೊಲೀಸರೊಂದಿಗೆ ಕೆಲವರು ವಾಗ್ವಾದವನ್ನೂ ನಡೆಸಿದರು.

ಕರ್ನಾಟಕ ಮುಸ್ಲಿಂ ಕೌನ್ಸಿಲ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಿಸಾಲ್ದಾರ್​, ಎಪಿಎಂಸಿ ಮಾಜಿ ಉಪಾಧ್ಯ ನಾಗಪ್ಪ ರೂಢಗಿ, ರೈತ ಸಂದ ಜಿಲ್ಲಾಧ್ಯ ಸಿದ್ದನಗೌಡ ಬಿರಾದಾರ ವಕೀಲರು, ವೇದಿಕೆ ಅಧ್ಯ ಪಿ.ಬಿ.ಮಾತಿನ್​ ಸೇರಿ ಹಲವರು ಗೆಹ್ಲೋಟ್​ ಅವರ ಕ್ರಮ ಖಂಡಿಸಿ ಮಾತನಾಡಿ, ಸಿದ್ದರಾಮಯ್ಯ ಅವರ ವಿರುದ್ಧ ಕುತಂತ್ರ ಮುಂದುವರಿದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಹಿಂದ, ಕುರುಬರ, ದಲಿತ, ಪ್ರಗತಿಪರ, ಹಿಂದುಳಿದ ವರ್ಗ ಸೇರಿ ವಿವಿಧ ಸಂಟನೆಗಳ ಪ್ರಮುಖರಾದ ನಾಗಪ್ಪ ಹಾಲಪ್ಪನವರ, ಎಸ್​.ಎಸ್​.ಕೆರಿಗೊಂಡ, ಪ್ರಚಂಡಪ್ಪ ಚಲವಾದಿ, ಅಬ್ಬು ಶಿರೋಳ, ಬಸವರಾಜ ಬಿರಾದಾರ, ಚಂದ್ರಶೇಖರ ಮೇಟಿ, ಎಸ್​.ಎ.ಬಿರಾದಾರ, ಬಿ.ಎಸ್​.ಬೈಲಕೊಂಡ, ಹಾಜಿ ತೆಗ್ಗಿ, ಸಿದ್ದಲಿಂಗಪ್ಪ ಹುಡೇದ, ಹೊನ್ನಪ್ಪ ಸರೂರ, ಮುತ್ತು ಕೊಣ್ಣೂರ, ಸಂಗಮೇಶ ಗಸ್ತಿಗಾರ, ಶಿವಪ್ಪ ಮೇಟಿ, ಸಿದ್ದು ವಾಲಿಕಾರ, ಶಿವಲಿಂಗಪ್ಪ ಯರಝರಿ, ಬಸವರಾಜ ಕೊಣ್ಣೂರ, ರಮೇಶ ವಗ್ಗರ, ಶರಣಗೌಡ ವಣಿಕ್ಯಾಳ, ಎಸ್​.ಎಸ್​.ಭಂಡಾರಿ ಇತರರಿದ್ದರು. ಪೊಲೀಸರು ಬಂದೋಬಸ್ತ್​ ಏರ್ಪಡಿಸಿದ್ದರು.