ಲಿಂಗಸುಗೂರು: ಮಸ್ಕಿ ತಾಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿದ್ದು, ಹೊಲಗಳಿಗೆ ತೆರಳುವ ರಸ್ತೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಸುತ್ತಲಿನ ಗ್ರಾಮಗಳ ರೈತರು ಸೋಮವಾರ ಎಸಿ ಕಚೇರಿಯ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ರಸ್ತೆಯ ಬದಿ ಬಿದ್ದಿದ್ದ ಬ್ಯಾಗ್ನಲ್ಲಿ ಮಹಿಳೆ ಶವ! ಗುರುತು ಹಿಡಿದವರಿಗೆ 25,000 ರೂ. ಘೋಷಿಸಿದ ಪೊಲೀಸ್| Trolley Bag
ಕೇಂದ್ರ ಸರ್ಕಾರ ಭಾರತ ಮಾಲಾ ಯೋಜನೆಯಡಿ 748ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕುಣಿಕಲ್ಲೂರು, ಗುಡಿಹಾಳ, ಮಟ್ಟೂರು ಮತ್ತು ಮಿಟ್ಟಿಕೆಲ್ಲೂರು ಗ್ರಾಮಗಳ ಶೇ.90 ರೈತರ ಜಮೀನುಗಳಿಗೆ ತೆರಳಲು ಹೆದ್ದಾರಿ ದಾಟಿ ಹೋಗಬೇಕಿದೆ.
ಕೃಷಿ ಆರಂಭವಾದಾಗಿನಿಂದ ಹೊಲಗಳಿಗೆ ತೆರಳುವ ಮಾರ್ಗಗಳಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ತೆರಳಲು ಚಕ್ಕಡಿ, ಟ್ರಾೃಕ್ಟರ್, ಲಾರಿಗಳ ಮೂಲಕ ಬೀಜ, ಗೊಬ್ಬರ, ರಾಶಿ ಮಾಡಿದ ಕೃಷಿ ಉತ್ಪನ್ನಗಳನ್ನು ಕೊಂಡೊಯ್ಯಲು ಈ ರಸ್ತೆಗಳ ಅಸ್ತಿತ್ವ ಅವಶ್ಯವಾಗಿವೆ. ಹೆದ್ದಾರಿ ನಿರ್ಮಿಸುವ ಗುತ್ತಿಗೆದಾರರು ಅಥವಾ ಅಧಿಕಾರಿಗಳು ರೈತರ ಸಭೆ ನಡೆಸಿ ಹೊಲಗಳಿಗೆ ತೆರಳುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ ಹೆದ್ದಾರಿ ನಿರ್ಮಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರಾದ ರಡ್ಡೆಪ್ಪಗೌಡ ಕಾಚಾಪುರ, ಶರಣಗೌಡ ಪಾಟೀಲ್, ಸಿದ್ದನಗೌಡ ಪಾಟೀಲ್, ಬಸನಗೌಡ ನಂದಿಹಾಳ, ವಿಜಯ ಕುಮಾರ್ ಕರೇಕಲ್, ಅಯ್ಯಣ್ಣ ಬುದ್ದಿನಿ, ಉಮೇಶ ಸ್ವಾಮಿ, ವಿರುಪಣ್ಣ ಈಚನಾಳ, ಶಶಿಧರ ದಿನ್ನಿಭಾವಿ, ಶಿವಪುತ್ರಗೌಡ, ಶರಣಪ್ಪ ಉದ್ಬಾಳ, ತಿರುಪತಿ ಗೋನವಾರ, ಈಶಪ್ಪ ಯಕ್ಕರನಾಳ, ಬಸವರಾಜ ಕಳಮಳ್ಳಿ, ಅಮರೇಶ, ಶರಣಗೌಡ ಮಾಲಿಪಾಟೀಲ್ ಇತರರಿದ್ದರು.