ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಸಭೆ ಕಮಲಶಿಲೆ ಕ್ಷೇತ್ರದಲ್ಲಿ ನಡೆಯಿತು. 
ಜಿಲ್ಲೆ

ಹಿರಿಯರ ಕ್ರಿಯಾಶೀಲತೆ ಪ್ರತಿಷ್ಠಾನ ಪೂರಕ: ಕೈಯೂರು ನಾರಾಯಣ ಭಟ್ ಅನಿಸಿಕೆ

ಸೌಮ್ಯ ಆರ್

ಬಂಟ್ವಾಳ: ಹಿರಿಯರು ಕ್ರಿಯಾಶೀಲರಾಗಿರಲು ಪ್ರತಿಷ್ಠಾನದ ಚಟುವಟಿಕೆಗಳು ಪೂರಕವಾಗಿದ್ದು, 50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಸೇರ್ಪಡೆಗೊಳ್ಳುವ ಮೂಲಕ ಉತ್ತಮ ಸೇವಾ ಕಾರ್ಯಗಳು ನಡೆಯುವಂತಾಗಬೇಕೆಂದು ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದರು.

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರು ಆಯೋಜಿಸಿದ್ದ ಕ್ಷೇತ್ರ ಸಂದರ್ಶನ ಕಾರ್ಯಕ್ರಮದ ನಿಮಿತ್ತ ಕಮಲಶಿಲೆ ಕ್ಷೇತ್ರದಲ್ಲಿ ಜರುಗಿದ ಪ್ರತಿಷ್ಠಾನದ ಕೇಂದ್ರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೀಲಾವರದ ಗೋಶಾಲೆ, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಮಂದಾರ್ತಿ ಕ್ಷೇತ್ರ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ವೀಕ್ಷಿಸಲಾಯಿತು.ಕಮಲಶಿಲೆ ಕ್ಷೇತ್ರದಲ್ಲಿ ಭರತ್.ಕೆ ಮಂಗಳೂರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯ ಶಂಕರ ರೈ ಪುಣಚ, ಜಯರಾಮ ಪೂಜಾರಿ ನರಿಕೊಂಬು, ಚಂದ್ರಶೇಖರ ಆಳ್ವ ಪಡುಮಲೆ, ರಾಮಕೃಷ್ಣ ನಾಯಕ್ ಕೋಕಳ ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ ಎಂ.ಧರ್ಮಸ್ಥಳ ವಂದಿಸಿದರು.