ಲಿಂಗಸುಗೂರು ಪುರಸಭೆ ನೂತನ ಅಧ್ಯಕ್ಷ ಬಾಬುರಡ್ಡಿ ಮುನ್ನೂರ ಅವರನ್ನು ಮುನ್ನೂರು ಕಾಪು ಸಮುದಾಯದಿಂದ ಸನ್ಮಾನಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಶರಣಪ್ಪ ಅಮರಪ್ಪ, ಮುನ್ನೂರು ಕಾಪು ಸಮಾಜದ ತಾಲೂಕು ಅಧ್ಯಕ್ಷ ರಾಜಪ್ಪರಡ್ಡಿ ಮುನ್ನೂರು, ಪ್ರಮುಖರಾದ ಭೀಮರಡ್ಡಿ ಮುನ್ನೂರು, ಮನೋಹರರಡ್ಡಿ ಮುನ್ನೂರು, ತಿಮ್ಮಾರಡ್ಡಿ ಮುನ್ನೂರು, ನರೇಶರಡ್ಡಿ ಮುನ್ನೂರು, ಎ.ಪಾಪರಡ್ಡಿ ಇತರರಿದ್ದರು. 
ಜಿಲ್ಲೆ

ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ಅಪಾರ

ರುದ್ರಪ್ಪ ವಾಲಿ

ಲಿಂಗಸುಗೂರು: ಜಿಲ್ಲೆಯಲ್ಲಿ ಮುನ್ನೂರು ಕಾಪು ಸಮುದಾಯ ಅಲ್ಪಸಂಖ್ಯೆಯಲ್ಲಿದ್ದರೂ ರಾಜಕೀಯದಲ್ಲಿ ಸದೃಢವಾಗಿದ್ದು, ಸಮಾಜಮುಖಿ ಕಾರ್ಯದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬರುತ್ತಿದೆ ಎಂದು ವಿಸಿಬಿ ಕಾಲೇಜು ನಿವೃತ್ತ ಪ್ರಾಚಾರ್ಯ ಸಿ.ಶರಣಪ್ಪ ಹೇಳಿದರು.

ಪಟ್ಟಣದ ಶಂಕರರಡ್ಡಿ ಕಲ್ಯಾಣ ಮಂಟಪದಲ್ಲಿ ಬುಧವಾರ ಮುನ್ನೂರು ಕಾಪು (ಬಲಿಜ) ಸಮಾಜದಿಂದ ಹಮ್ಮಿಕೊಂಡಿದ್ದ ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ರಡ್ಡಿ ಸಮುದಾಯದಲ್ಲಿ 39 ಉಪಜಾತಿಗಳಿದ್ದು, ಸಸ್ಯಹಾರ, ಮಾಂಸಹಾರ ಸೇವನೆಯ ಸಮುದಾಯಗಳೂ ಇವೆ. ತಾಲೂಕಿನಲ್ಲಿ ನೆಲೆಸಿದ ಕೆಲವೇ ಕೆಲ ಕುಟುಂಬಗಳ ಪ್ರಮುಖರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮುನ್ನೂರು ಕಾಪು ಸಮುದಾಯದ ಹಿರಿಯ ಮಾರ್ಗದರ್ಶನದಲ್ಲಿ ನೂತನ ಅಧ್ಯಕ್ಷ ಬಾಬುರಡ್ಡಿ ಮುನ್ನೂರು ಕೂಡ ರಾಜಕೀಯವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪವಾಗಿ ಸ್ಪಂದಿಸಿದರೆ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿ, ಕಳೆದ 28 ವರ್ಷದ ಬಳಿಕ ಮುನ್ನೂರು ಕಾಪು ಸಮುದಾಯಕ್ಕೆ ಪುರಸಭೆ ಅಧ್ಯಕ್ಷ ಗಾದಿ ದೊರೆತಿದ್ದು, ಅಧ್ಯಕ್ಷ ಬಾಬುರಡ್ಡಿ ಮುನ್ನೂರು ಅವರು ಸರ್ವ ಸದಸ್ಯರ ಮತ್ತು ಸಮಾಜದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ ಎಂದು ಹೇಳಿದರು.