ಹುಮನಾಬಾದ್: ಬೀದರ್-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿರುವ ಹಳ್ಳಿಖೇಡ (ಕೆ) ಗ್ರಾಮದಲ್ಲಿ ಸೋಮವಾರ ಸಂಜೆ ಶರಣ ಕಿನ್ನರಿ ಬೊಮ್ಮಯ್ಯನವರ ರಥೋತ್ಸವ ಅಪಾರ ಜನಸ್ತೋಮದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ಮಹಾರುದ್ರಾಭಿಷೇಕ, ಪೂಜೆ, ಭಜನೆ, ಮಧ್ಯಾಹ್ನ ದೇವಸ್ಥಾನದಿಂದ ರಥದವರೆಗೆ ಕುಂಭ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಶ್ರದ್ಧಾ ಭಕ್ತಿಯೊಂದಿಗೆ ಸಂಗೀತ ವ್ಯಾದ ಮೇಳಗಳೊಂದಿಗೆ ಭಕ್ತರ ಜೈ ಘೋಷಣೆಗಳ ಮಧ್ಯೆ ವೈಭವದ ರಥೋತ್ಸವ ಆರಂಭಗೊಂಡಿತು. ರಥೋತ್ಸವ ಉದ್ದಕ್ಕೂ ಭಕ್ತರು ಬಾಳೆ ಹಣ್ಣುಗಳನ್ನು ಹಾರಿಸಿ ಹರಕೆ ತಿರಿಸಿ ದರ್ಶನ ಪಡೆದರು.
ಶ್ರೀ ಉದಯ ರಾಜಯೋಗೀಂದ್ರ ಸ್ವಾಮಿ, ಶ್ರೀ ಸಿದ್ದರಾಮ ದೇವರು, ಕಲ್ಲೂರದ ಶ್ರೀ ಮೃತ್ಯುಂಜಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬೀದರ್, ಕಲಬುರಗಿ ಜಿಲ್ಲೆಯ ನಾನಾ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು, ಸಂಘ ಸಂಸ್ಥೆಗಳ ಪ್ರಮುಖರು, ಸ್ವೆಯಂ ಸೇವಕರು ಪಾಲ್ಗೊಂಡಿದ್ದರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸುಭಾಷ ವಾರದ, ಪ್ರಮುಖರಾದ ಮಲ್ಲಯ್ಯ ಚಿಕ್ಕಮಠ, ಅಣ್ಣರಾವ ರಟಕಲ್, ಸುಭಾಷ ಚಿಲ್ಲಶೆಟ್ಟಿ, ಭಕ್ತರಾಜ ಚಿತ್ತಾಪುರೆ, ಸಿದ್ರಾಮ ಇಂಡಿ, ಮಲ್ಲಿಕಾರ್ಜುನ ತಟಪಟ್ಟಿ, ಇಂದ್ರಕರಣ ಬಿರಾದಾರ, ನಾಗಣ್ಣ ಚಿಕ್ಕಪಾಟೀಲ್, ಉದಯ ವಾರದ, ಭೀಮಶಾ ಕೋರಿ, ಶರಣಬಸಪ್ಪ ಪಡಶೆಟ್ಟಿ, ಮಹೇಶ ಚಿಲಶೆಟ್ಟಿ, ಸಂಗಮೇಶ ಸಿದ್ಧೇಶ್ವರ, ಮೈಲಾರಿ ಬುಕ್ಕಾ, ಭೀಮಶಾ ಸ್ವಂತ, ಚಿದಾನಂದ ಚಿಕ್ಕಮಠ, ಮಹಾದೇವ ಗಿರಿ, ಗುಂಡಪ್ಪ ಕೋರಿ, ರಮೇಶ ವಾರದ, ರಘುರಾವ ಬಿರಾದಾರ ಇತರರಿದ್ದರು.