ಕಿಕ್ಕೇರಿಲ್ಲಿ ಮಕ್ಕಳು ಓಕುಳಿ ಆಟವಾಡಿ ಸಂಭ್ರಮಿಸಿದರು.  
ಜಿಲ್ಲೆ

ಹನುಮ ದೇವರ ಉತ್ಸವ

ಅಭಿನಯ್ ಎಚ್.ಎಂ

ಕಿಕ್ಕೇರಿ: ವಿಪ್ರ ಬಾಂಧವ ಸೇವಾ ಸಮಿತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಹನುಮಂತೋತ್ಸವದಲ್ಲಿ ಪುಟಾಣಿಗಳು, ಯುವಕರು, ಹಿರಿಯರು ಓಕುಳಿಯಾಡಿ ಸಂಭ್ರಮಿಸಿದರು.

ಹನುಮ ದೇವರ ಉತ್ಸವ ಮನೆ ಮುಂದೆ ಬಂದಾಗ ಹಣ್ಣು, ಕಾಯಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ರಜೆಯ ಮಜೆಯಲ್ಲಿದ್ದ ಮಕ್ಕಳು ಬಣ್ಣದ ಓಕುಳಿಯಾಟವಾಡಲು ಕಾದು ಕುಳಿತಿದ್ದರು. ಹಿರಿಯರು, ಯುವಕರು ಮಕ್ಕಳಿಗೆ ಸಾಥ್ ನೀಡಿದರು. ಮನೆಯ ಮುಂದೆ ಬಕೆಟ್, ಬಿಂದಿಗೆಯಲ್ಲಿ ಬಣ್ಣದ ನೀರು ಶೇಖರಣೆ ಮಾಡಿಕೊಂಡು ಪೈಪೋಟಿ ಮೇಲೆ ಬಣ್ಣವನ್ನು ಮೈಮೇಲೆ ಹಾಕಿದರು.

ಸ್ಥಳೀಯರಾದ ಅನಂತಸ್ವಾಮಿ, ಕೆ.ಬಿ. ವೆಂಕಟೇಶ್, ಕೆ.ಎಸ್.ಪರಮೇಶ್ವರಯ್ಯ, ಶ್ರೀಹರಿ, ಶ್ರೀಧರ್ ಮತ್ತಿತರರಿದ್ದರು.