raichur  
ಜಿಲ್ಲೆ

ಬಿಸಿಲ ನಾಡಲ್ಲಿ ಬೆಳಕಿನ ಹಬ್ಬದ ಸಂಭ್ರಮ *ದುಪಟ್ಟು ದರಕ್ಕೆ ಹೂ ಮಾರಾಟ

 ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಆಚರಣೆ ಮಾಡಲು ಜನರಲ್ಲಿ ಹಬ್ಬ ಮನೆ ಮಾಡಿದೆ. ತೋರಣ, ಕಬ್ಬು, ಕಾರ್ತಿಕ ಬುಟ್ಟಿ, ಹೊಸ ಬಟ್ಟೆ ಖರೀದಿ ಜೋರಾಗಿದೆ. ದೀಪಾವಳಿ ಸಂಭ್ರಮ ಮನೆಮನೆಗಳಲ್ಲಿ ತುಪ್ಪದ ಘಮಲು ಬೀರುವಂತೆ ಮಾಡಿದೆ.

ಭರ್ಜರಿ ಹೋಳಿಗೆ, ವಡೆ, ರಸಪೂರಿ ಭೋಜನ ಸಿದ್ಧವಾಗಿದ್ದು ಬಾಯಲ್ಲಿ ನೀರು ತರಿಸಿದೆ. ಲಕ್ಷ್ಮಿ ದೇವಿಯ ಪೂಜೆಯ ಘಂಟಾನಾದ ಹೊರಹೊಮ್ಮಿದ್ದು, ಎಲ್ಲರ ಬಾಳಲ್ಲಿ ಆರ್ಥಿಕ ಅಭ್ಯುದಯದ ಜತೆಗೆ ಸುಖಸಂತಸ, ಆರೋಗ್ಯಭಾಗ್ಯ ಎಲ್ಲರದಾಗಲೆಂದು ಭಕ್ತಿಭಾವದ ಪ್ರಾರ್ಥನೆ ನಡೆದಿದ್ದು, ಮನೆ,ಅಂಗಡಿ,ಕಾರ್ಖಾನೆಗಳಲ್ಲಿ ಲಕ್ಷ್ಮೀಪೂಜೆ, ಪಾಡ್ಯ ದಿನವನ್ನು ಸಂಭ್ರಮದಿಂದ ಅಚರಿಸಲು ಜನರು ಸಿದ್ಧವಾಗಿದ್ದು, ಸೋಮವಾರ ಹೂವು ಮತ್ತು ಹಣ್ಣಿನ ಖರೀದಿ ಜೋರಾಗಿತ್ತು.

ಕೆಲ ದಿನಗಳ ಹಿಂದೆ ಹೂವಿನ ದರ ಕುಸಿದಿತ್ತು. ದೀಪಾವಳಿ ಅಂಗವಾಗಿ ಪೂಜೆ, ಅಲಂಕಾರ ಉದ್ದೇಶಗಳಿಗಾಗಿ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ದರಗಳಲ್ಲಿ ಏರಿಕೆಯಾಗಿದೆ. ದೀಪಾವಳಿಯ ಹಬ್ಬದಲ್ಲಿ ಸೇವಂತಿಗೆ, ಚೆಂಡು ಹೂವು, ಕನಕಾಂಬರ, ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರಿ ಕಚೇರಿಗಳು, ಕಾರ್ಖಾನೆ, ವ್ಯಾಪಾರಿ ಮಳಿಗೆ, ವಾಹನಗಳು, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುತ್ತದೆ. ಗುಣಮಟ್ಟದ ಹೂವಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚು. ಹಬ್ಬದ ಸಮಯದಲ್ಲಿ ಹೂವಿನ ಬೆಲೆ ದುಪ್ಪಟ್ಟಗಿರುವುದುಸದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತು.

ಚೆಂಡು ಹೂವು ಕೆ.ಜಿ.ಗೆ 80 ರೂ, ಹಳದಿ ಸೇವಂತಿಗೆ ಕೆ.ಜಿ.ಗೆ 200 ರೂ, ಗುಲಾಬಿ ಕೆ.ಜಿ.ಗೆ 350 ರೂ, ಸುಗಂಧಿ ಕೆ.ಜಿ.ಗೆ 250, ಮಲ್ಲಿಗೆ ಮಾರಿಗೆ 100 ರಂತೆ ದರ ನಿಗದಿಪಡಿಸಲಾಗಿದೆ. ಅದರಂತೆ ಸೇಬು ಕೆ.ಜಿ.ಗೆ 200 ರೂ, ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ 150 ರೂ, ಮೂಸಂಬಿ ಕೆ.ಜಿ.ಗೆ 60 ರೂ , ಕಪ್ಪು ದ್ರಾಕ್ಷಿ ಕೆ.ಜಿ.ಗೆ 80ರೂ , ಪೇರಲೆ ಕೆ.ಜಿ.ಗೆ 80 ರೂ, ಸೀತಾಫಲ ಕೆ.ಜಿ.ಗೆ 60, ದಾಳಿಂಬೆ ಕೆ.ಜಿ.ಗೆ 100, ಬಾಳೆದಿಂಡು ಒಂದು ಜೋಡಿಗೆ ಕೆ.ಜಿ.ಗೆ 60 ರಿಂದ 100 ರೂ, ಬೂದಗುಂಬಳ ಒಂದಕ್ಕೆ 100 ರಿಂದ 250 ದರದಲ್ಲಿ ಮಾರಾಟವಾಗುತ್ತಿವೆ.

ನಮ್ಮ ಕುಂಬಾರರು ತಯಾರಿಸಿದ ಸಾಂಪ್ರದಾಯಿಕ ಪ್ರಣತಿ ಜತೆಗೆ ಜನತೆ ತಮ್ಮ ಅಭಿರುಚಿಗೆ ತಕ್ಕಂತೆ ಬಗೆಯ ಆಕರ್ಷಕ ಪ್ರಣತಿ ಖರೀದಿಗೂ ಉತ್ಸುಕತೆ ತೋರುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ರಾಜಸ್ತಾನದ ಜೋಧಪುರ್‌ದಲ್ಲಿ ತಯಾರಗೊಂಡ ವಿವಿಧ ಬಗೆಯ ಪ್ರಣತಿಗಳು ನಗರದ ವಿವಿಧ ರಸ್ತೆಗಳಲ್ಲಿ ಮಾರಾಟಕ್ಕೆ ಮಾರಾಟ ಮಾಡುತ್ತಿರುವುದು ಕಂಡುಬಂದಿತ್ತು.

ನಗರದ ಮಾರುಕಟ್ಟೆ,ಬಂಗಿಕುಂಟಾ,ಬಂಗಾರ ಬಜಾರ,ತೀನ್ ಕಂದೀಲ್ ಜನ ಜಂಗುಳಿಯಿಂದ ಚಂದ್ರಮೌಳೇಶ್ವರ ವೃತ್ತ, ಪಟೇಲ್ ರಸ್ತೆ, ಬಸವೇಶ್ವರ ವೃತ್ತದ ರಸ್ತೆಯಲ್ಲಿ ಸಂಚಾರ ಸಮಸ್ಯೆಯಾಯಿತು.