ಹಳ್ಳಿಖೇಡ (ಕೆ) ಗ್ರಾಮದಲ್ಲಿ ಮಂಗಳವಾರ ನಡೆದ ಧರ್ಮಸಭೆ ಹಾಗೂ ಜಾನಪದ ಸಂಜೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲï ಉದ್ಘಾಟಿಸಿದರು. ಶ್ರೀ ಶಿವಾನಂದ ದೇವರು, ಶ್ರೀ ಶಿವಪ್ರಸಾದ ದೇವರು, ಶ್ರೀ ಚರಮೂರ್ತಿ ಸಿದ್ಧö್ದರಾಮ ಸ್ವಾಮಿ, ಡಾ.ಸೋಮನಾಥ ಯಾಳವಾರ, ಮಲ್ಲಿಕಾರ್ಜುನ ಸಂಗಮಕರ, ಸುಭಾಷ ವಾರದ, ಉದಯಕುಮಾರ ವಾರದ, ಸಿದ್ರಾಮ ಇಂಡಿ, ಭೀಮಶಾ ಕೋರಿ ಇತರರಿದ್ದರು. 
ಜಿಲ್ಲೆ

ಶರಣರ ತತ್ವಾದರ್ಶ ಮಕ್ಕಳಿಗೆ ತಿಳಿಸಿ

ಹುಮನಾಬಾದ್: ಶರಣ ಕಿನ್ನರಿ ಬೊಮ್ಮಯ್ಯ ಸೇರಿ ಬಸವಾದಿ ಶರಣರ ತತ್ವಾದರ್ಶಗಳು ಮಕ್ಕಳಿಗೆ ತಿಳಿಸುವ ಜತೆಗೆ ಉತ್ತಮ ಸಂಸ್ಕಾರ ನೀಡಲು ಪ್ರತಿಯೊಬ್ಬ ಪಾಲಕರು ಮುಂದಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹೇಳಿದರು.

ಹಳ್ಳಿಖೇಡ (ಕೆ) ಗ್ರಾಮದಲ್ಲಿ ಮಂಗಳವಾರ ಸಂಜೆ ಕಿನ್ನರಿ ಬೊಮ್ಮಯ್ಯನವರ ಜಾತ್ರೋತ್ಸವ ನಿಮಿತ್ತ ನಡೆದ ಧರ್ಮಸಭೆ ಹಾಗೂ ಜಾನಪದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತ್ರೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದಲ್ಲದೆ, ಭಾವೈಕೆತೆ ಸಂಕೇತವಾಗಿವೆ. ಈ ಮೂಲಕ ನಾವೆಲ್ಲರೂ ಧರ್ಮ ಜಾಗೃತಿ ಜತಗೆ ಮಕ್ಕಳಲ್ಲಿ ಪ್ರತಿನಿತ್ಯ ಶರಣರ ವಚನಗಳನ್ನು ತಿಳಿಸಿ ಹೇಳಲು, ಕಲಿಸಲು ಪಾಲಕರು ಮುಂದಾಗಬೇಕು. ಬೊಮ್ಮಯ್ಯನವರ ತತ್ವ ಆದರ್ಶ ಜಿವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಗ್ರಾಮದ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಸಹಕಾರ ನೀಡಿದ್ದು, ಮುಂದೆಯು ಸಹ ನಮ್ಮ ಕುಟುಂಬ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ದೇವರು, ಶ್ರೀ ಶಿವಪ್ರಸಾದ ದೇವರು ಸಾನ್ನಿಧ್ಯ ವಹಿಸಿದ್ದರು. ಸ್ಥಳೀಯ ಹಿರೇಮಠದ ಶ್ರೀ ಸಿದ್ಧರಾಮ ಸ್ವಾಮಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ಸಾಹಿತಿ ಡಾ.ಸೋಮನಾಥ ಯಾಳವಾರ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಂಗಮಕರ, ಶರಣ ಕಿನ್ನರಿ ಬೊಮ್ಮಯ್ಯನವರ ಜೀವನ ಚರಿತ್ರೆ ಕುರಿತು ಮಾತನಾಡಿದರು.

ಖ್ಯಾತ ಜಾನಪದ ಹಾಸ್ಯ ಕಲಾವಿದ ಜೀವನಸಾಬ್ ವಾಲಿಕಾರ ತಮ್ಮ ಹಾಸ್ಯ ಚಟಾಕಿಯ ಮೂಲಕ ಸಭಿಕರ ಮನಸೊರೆಗೊಂಡರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸುಭಾಷ ವಾರದ, ಪ್ರಮುಖರಾದ ಮಲ್ಲಯ್ಯ ಚಿಕ್ಕಮಠ, ಪ್ರಮುಖರಾದ ಅಣ್ಣರಾವ ರಟಕಲï, ಸುಭಾಷ ಚಿಲ್ಲಶೆಟ್ಟಿ, ಭಕ್ತರಾಜ ಚಿತ್ತಾಪುರೆ, ಉದಯಕುಮಾರ ವಾರದ, ಮೈಲಾರಿ ಬುಕ್ಕಾ, ಮಹೇಶ ಚಿಲಶೆಟ್ಟಿ, ಚಿದಾನಂದ ಚಿಕಮಠ, ಪ್ರಕಾಶ ಬಾವಗಿ ಇತರರಿದ್ದರು. ಭೀಮಶಾ ಕೋರಿ ಸ್ವಾಗತಿಸಿದರು. ಭೀಮಶಾ ಸೊಂತ ವಂದಿಸಿದರು. ಸಿದ್ರಾಮ ಇಂಡಿ ನಿರೂಪಣೆ ಮಾಡಿದರು.

ಸೋಮವಾರ ಸಂಜೆ ನಡೆದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡೊಂಗರಗಾಂವದ ಶ್ರೀ ಉದಯರಾಜಯೋಗೇಂದ್ರ ಶಿವಾಚಾರ್ಯರು, ಕಲ್ಲೂರದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ನೇತೃತ್ವ ಸ್ಥಳೀಯ ಹಿರೇಮಠದ ಶ್ರೀ ಸಿದ್ಧರಾಮ ಸ್ವಾಮಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ಬೀದರ್ ನವರಸ ಕಲಾ ತಂಡದ ವೈಜಿನಾಥ ಸಜ್ಜನಶೆಟ್ಟಿ, ಶೃತಿ, ಬೆಳಗಾವಿಯ ಮಿಮಿಕ್ರಿ ಹಾಸ್ಯ ಕಲಾವಿದ ಮಹಾಂತೇಶ ಹಡಪದ ಅವರಿಂದ ಹಾಸ್ಯ ಮಂಜರಿ ಕಾರ್ಯಕ್ರಮ ಜರುಗಿದವು.