ಬೈಲಕುಪ್ಪೆ: ಶ್ರೀ ದೊಡ್ಡಮ್ಮ ತಾಯಿಯ ಪ್ರತಿಷ್ಠ ಅಷ್ಟ ಬಂದ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಒಂದನೇ ಕ್ಯಾಂಪ್ ರಸ್ತೆ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೊಡ್ಡಮ್ಮ ತಾಯಿ ದೇವಸ್ಥಾನ ಆವರಣದಲ್ಲಿ ಶನಿವಾರದಿಂದ ಸೋಮವಾರವರೆಗೆ ವಿವಿಧ ಹೋಮಗಳು ನಡೆದವು. ದೇವಸ್ಥಾನ ಸ್ವಚ್ಛಗೊಳಿಸಿ, ತಳಿರು, ತೋರಣ ಕಟ್ಟಿ ಗ್ರಾಮದಲ್ಲಿ ರಸ್ತೆಯುದ್ದಕ್ಕೂ ವಿದ್ಯುತ್ ದ್ವೀಪ ಅಲಂಕಾರ ಮಾಡಲಾಗಿತ್ತು.
ವಿವಿಧ ಪೂಜೆ ನಡೆಸಿ, ಮಹಿಳೆಯರು 108 ಕಲಶ ಹೊತ್ತು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ವಾದ್ಯಗೋಷ್ಠಿಯೊಂದಿಗೆ ಶಾಹಿತ ಬ್ರಹ್ಮ ಕುಂಭಾಭಿಷೇಕ ಮಹಾಪೂಜೆಯೊಂದಿಗೆ ದೊಡ್ಡಮ್ಮತಾಯಿ ದೇವಸ್ಥಾನದ ಆವರಣಕ್ಕೆ ಮೆರವಣಿಗೆ ಕರೆತಂದು ಮಹಾ ಶ್ಲೋಕಗಳೊಂದಿಗೆ ಪೂಜಾ ನಡೆಸಿ, ಮಹಾ ಮಂಗಳಾರತಿ ನೆರವೇರಿಸಲಾಯಿತು.
ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಗ್ರಾಮದ ಯುವಕರಾದ ಸ್ವಾಮಿ, ಶಿವ, ರಾಮು, ಬಿ.ಟಿ.ಶಿವ, ವಿಠಲ, ನಟರಾಜ್, ಸ್ವಾಮಿ, ನಾರಾಯಣ, ರವಿ, ದರ್ಶನ್, ನಾಗೇಶ್, ಮೂರ್ತಿ, ರಘು, ಶರತ್ ಇತರರು ಇದ್ದರು.