ಜಿಲ್ಲೆ

ಹಬ್ಬ, ಹುಣ್ಣಿಮೆ ಪ್ರಕೃತಿಗೆ ಪೂರಕ

ಉತ್ತರ ಕನ್ನಡ ಡೆಸ್ಕ್

ಲಕ್ಷ್ಮೇಶ್ವರ: ಋತುಗಳಿಗೆ ತಕ್ಕಂತೆ ಹಬ್ಬ, ಹುಣ್ಣಿಮೆಗಳು ಪ್ರಕೃತಿಗೆ ಪೂರಕವಾಗಿವೆ. ಅನ್ನದಾತನ ಸಂಗಾತಿಯಾದ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸುವುದು ಕಾರ ಹುಣ್ಣಿಮೆಯ ವಿಶೇಷವಾಗಿದೆ ಎಂದು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಹೇಳಿದರು.

ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಜರುಗಿದ ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಶೇಖಪ್ಪ ಉಪ್ಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಟೀಲ, ಶಿವಜೋಗಪ್ಪ ಚಂದರಗಿ, ಚಿಂತಕ ಡಿ.ಬಿ.ಬಳಿಗಾರ, ಹಾಲೆವಾಡಿಮಠ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳಾದ ಪೂರ್ಣಾಜಿ ಕರಾಟೆ, ನೀಲಪ್ಪ ಕರ್ಜಕಣ್ಣವರ, ಸುರೇಶ ರಾಚನಾಯ್ಕರ, ಸೋಮಣ್ಣ ಅಣ್ಣಿಗೇರಿ, ಎಸ್.ಎಫ್. ಆದಿ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹಣಗಿ, ಎಂ.ಕೆ. ಕಳ್ಳಿಮಠ, ನಿಂಗಪ್ಪ ಗೊರವರ, ಎನ್.ಆರ್. ಸಾತಪುತೆ, ಗೋಪಾಲ ನಾಯಕ, ಎಸ್.ಎಸ್. ಬಳ್ಳೊಳ್ಳಿ, ಅಶೋಕ ನೀರಾಲೋಟಿ, ಎಚ್.ಜಿ.ದುರಗಣ್ಣವರ ಮುಂತಾದವರು ಹಾಜರಿದ್ದರು.

ಕಮಿಟಿ ಸಂಚಾಲಕ ಗಂಗಾಧರ ಗುಡಗೇರಿ, ನಾಗರಾಜ ಕಳಸಾಪುರ, ಸೋಮಶೇಖರ ಕೆರಿಮನಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ಜಯಪ್ರಕಾಶ ಹೊಟ್ಟಿ ಪ್ರಾರ್ಥಿಸಿದರು. ಸ್ನೇಹ ಮಾಲಿಗೌಡ್ರ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಉಪ್ಪಿನ ವಂದಿಸಿದರು.