ಬಾಳೆಹೊನ್ನೂರಿನ ಬಂಡಿಮಠದ ಬಾಲಸುಬ್ರಹ್ಮಣ್ಯದೇವಸ್ಥಾನದ ಪಂಗುಣಿ ಉತ್ತಿರಂ ಮಹೋತ್ಸವದ ನಿಮಿತ್ತ ಹಾಲು ಬಿಂದಿಗೆ ಉತ್ಸವ ನಡೆಸಲಾಯಿತು. 
ಜಿಲ್ಲೆ

ಹಾಲು ಬಿಂದಿಗೆ ಉತ್ಸವದ ಸಂಭ್ರಮ

Shivamogga - Desk - Vinayakumar D B

ಬಾಳೆಹೊನ್ನೂರು: ಪಟ್ಟಣದ ಬಂಡಿಮಠದ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಗುಣಿ ಉತ್ತಿರಂ ಮಹೋತ್ಸವದ ಅಂಗವಾಗಿ ಸೋಮವಾರ ಹಾಲು ಬಿಂದಿಗೆ ಉತ್ಸವ ಸಂಭ್ರಮದಿಂದ ನಡೆಯಿತು.

ಪಂಗುಣಿ ಉತ್ತಿರಂ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹ ಸಂಕಲ್ಪ, ಪುಣ್ಯಾರ್ಚನೆ, ಧ್ವಜಾರೋಹಣ, ಬಾಲಸುಬ್ರಹ್ಮಣ್ಯಸ್ವಾಮಿಗೆ ಮೂಲಮಂತ್ರ ಹೋಮ, ಕಲಶಾಭಿಷೇಕ, ಸತ್ಯನಾರಾಯಣ ಪೂಜೆ, ನಾಗ ಸಾನ್ನಿಧ್ಯ, ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನಡೆಯಿತು.
ಇದಕ್ಕೂ ಮುನ್ನ ಪಟ್ಟಣದ ಜೇಸಿ ವೃತ್ತದಲ್ಲಿನ ಬಲಮುರಿ ಗಣಪತಿಗೆ ಪೂಜೆ ಸಲ್ಲಿಸಿ, ಹಾಲು ಬಿಂದಿಗೆ ಪೂಜೆ ನಡೆಸಿ ಬಾಲಸುಬ್ರಹ್ಮಣ್ಯ ದೇವಾಲಯದವರೆಗೆ ಭಕ್ತರು ಮೆರವಣಿಗೆ ನಡೆಸಿದರು. ನಂತರ ಭದ್ರಾ ನದಿಗೆ ತೆರಳಿ ಗಂಗೆ ಪೂಜೆ ನೆರವೇರಿಸಿ ಬಾಲಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ ನೆರವೇರಿಸಿದರು. ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಉತ್ಸವ ವಾಹನದಲ್ಲಿ ಬಾಲಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ವಾದ್ಯಗೋಷ್ಠಿ ಹಾಗೂ ಸಿಡಿಮದ್ದು ಪ್ರದರ್ಶನದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸುತ್ತಮುತ್ತಲ ಭಕ್ತರು ಪಾಲ್ಗೊಂಡಿದ್ದರು.