ಜಿಲ್ಲೆ

ಬೆಂಗಳೂರಿಗೆ ದೋಣಿ ಆಸರೆ; 3 ದಿನದ ಸತತ ಮಳೆಗೆ ರಾಜಧಾನಿ ತತ್ತರ

ಬೆಂಗಳೂರು: ಒಂದು ವಾರದಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ದಿನ್ಕಕೊಂದು ಭಾಗದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ನಗರದ ನಾಲ್ಕೂ ದಿಕ್ಕುಗಳಲ್ಲಿ ಜನಜೀವನ ಅಸ್ತವಸ್ತಗೊಂಡಿದೆ. ಜಲಾವೃತ ರಸ್ತೆಗಳಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿರುವುದು ಒಂದೆಡೆಯಾದರೆ, ಮುಳುಗುತ್ತಿರುವ ಮನೆ, ಅಪಾರ್ಟ್​ವೆುಂಟ್ ನಿವಾಸಿಗಳ ರಕ್ಷಣೆಗಾಗಿ ದೋಣಿಗಳು ಕಾರ್ಯಾಚರಣೆಗಿಳಿದಿರುವುದು ಮಳೆ ಅವಾಂತರದ ಭೀಕರತೆ ತೆರೆದಿಟ್ಟಿದೆ. ಹೆಣ್ಣೂರು ಸಮೀಪ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಓರ್ವ ಕಾರ್ವಿುಕ ಮೃತಪಟ್ಟಿದ್ದು, 7 ಜನ ಗಾಯಗೊಂಡಿದ್ದಾರೆ.

ತಡರಾತ್ರಿ ಅಬ್ಬರ: ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಯಲಹಂಕ ಹಾಗೂ ಅದರ ಸುತ್ತಮುತ್ತಲಿನ ಬಡಾವಣೆಗಳು ಜಲಾವೃತವಾದವು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸರ್ವಿಸ್ ರಸ್ತೆಯುದ್ದಕ್ಕೂ ಮೊಣಕಾಲುದ್ದದಷ್ಟು ನೀರು ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಮಾರ್ಗವಾಗಿಯೇ ಬೇರೆಡೆಗೆ ತೆರಳಬೇಕಿದ್ದ ಬಿಎಂಟಿಸಿ ಬಸ್​ಗಳು, ಖಾಸಗಿ ಬಸ್​ಗಳು ಸೇರಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ವಾಹನಗಳು ಮೇಲ್ಸೇತುವೆ ಮೂಲಕ ಸುತ್ತುಬಳಸಿ ತೆರಳಬೇಕಾಯಿತು.

ನಡುಗಡ್ಡೆಯಾದ ಅಪಾರ್ಟ್​ವೆುಂಟ್: ಯಲಹಂಕದ ಕೋಗಿಲು ಕ್ರಾಸ್ ಬಳಿಯಿರುವ ಕೇಂದ್ರೀಯ ವಿಹಾರ್ ಅಅಪಾರ್ಟ್​ವೆುಂಟ್​ಗೆ ಮಳೆನೀರು ನುಗ್ಗಿ ಹೆಚ್ಚಿನ ಸಮಸ್ಯೆ ಯಾಯಿತು. ರಾಜಕಾಲುವೆ ಬದಿಯಲ್ಲೇ ಇರುವ ಈ ಅಪಾರ್ಟ್ಮೆಂಟ್ ಕೆರೆಯ ಸನಿಹದಲ್ಲೇ ಇದೆ. ಇದರಿಂದ ಮಳೆನೀರು ನುಗ್ಗಿ ಅನಾಹುತ ಸಂಭವಿಸಿದೆ.

ಬರೋಬ್ಬರಿ 2 ಸಾವಿರ ಜನರಿರುವ ಈ ಅಪಾರ್ಟ್​ವೆುಂಟ್ ಆವರಣದಲ್ಲಿ ಸಂಗ್ರಹಗೊಂಡಿರುವ ನೀರನ್ನು ಹೊರಹಾಕಲು ಇನ್ನೂ 2 ದಿನಗಳು ಹಿಡಿಯಲಿವೆ. ಸದ್ಯಕ್ಕೆ ಅಲ್ಲಿರುವ ಜನರನ್ನು ಹೊರಸಾಗಿಸಲು 16 ಬೋಟ್​ಗಳನ್ನು ಬಳಸಿಕೊಳ್ಳಲಾಯಿತು. ಅಗ್ನಿಶಾಮಕದ 2 ವಾಹನ ಹಾಗೂ 20 ಸಿಬ್ಬಂದಿ, ಎನ್​ಡಿಆರ್​ಎಫ್​ನ 75 ಸಿಬ್ಬಂದಿ, ಬಿಬಿಎಂಪಿಯ 25 ಅಧಿಕಾರಿ/ಸಿಬ್ಬಂದಿ, ಎಸ್​ಡಿಆರ್​ಎಫ್​ನ 25 ಸಿಬ್ಬಂದಿ ಕಾರ್ಯನಿರ್ವಹಿಸಿದರು.

ಅಪಾರ್ಟ್​ವೆುಂಟ್​ಗೆ ಬರುವ ನೀರನ್ನು ತಡೆಯಲು ಪಾಲಿಕೆಯಿಂದ ತಾತ್ಕಾಲಿಕವಾಗಿ ಅಡ್ಡಲಾಗಿ ಮರಳು ಚೀಲಗಳು ಹಾಕಲಾಗಿದೆ. ನೀರುಗಾಲುವೆಯ ಪಕ್ಕದಲ್ಲೇ ಕಚ್ಚಾ ಡ್ರೖೆನ್ ಮಾಡಿ, ಅದರ ಮೂಲಕ ನೀರು ಹರಿದು ಹೋಗುವಂತೆ ಮಾಡಲಾಗಿದೆ. ಸುರಭಿ ಲೇಔಟ್ ಹಾಗೂ ಟಾಟಾನಗರದಲ್ಲಿ ತಲಾ ಒಂದು ಬೋಟ್ ಬಳಸಿ ಜನರನ್ನು ಸುರಕ್ಷಿತ ಜಾಗಕ್ಕೆ ರವಾನಿಸಲಾಯಿತು. ಈ ಕಾರ್ಯದಲ್ಲಿ ಸ್ಥಳೀಯ ಜನರು ಹಾಗೂ ಪಾಲಿಕೆ ಸಿಬ್ಬಂದಿ ಹರಸಾಹಪಟ್ಟರು.

ಬಾಯ್ತೆರೆದ ಗುಂಡಿಗಳು: ಯಲಹಂಕ ಹಾಗೂ ಸುತ್ತಲಿನ ಬಡಾವಣೆಗಳಲ್ಲಿ ಮಳೆನೀರಿನಿಂದ ಭಾರಿ ಸಮಸ್ಯೆಯಾಯಿತು. ಹಲವು ಬಡಾವಣೆಗಳಲ್ಲಿ ನೀರು ಹರಿದುಹೋದ ಬಳಿಕ ರಸ್ತೆಯಲೆಲ್ಲಾ ಕೊಚ್ಚೆ ಕಾಣಿಸಿಕೊಂಡಿತು. ಇದರಲ್ಲೇ ನಾಗರಿಕರು ಅನಿವಾರ್ಯವಾಗಿ ನಡೆದುಹೋಗಬೇಕಾಯಿತು. ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಜತೆಗೆ ರಸ್ತೆಯಲ್ಲೆಲ್ಲ ಚರಂಡಿ ನೀರು ಉಕ್ಕಿ ಹರಿಯುತ್ತಿದ್ದು, ಕೆಲವೆಡೆ ನಡೆದುಕೊಂಡು ಹೋಗುವುದೂ ಕಷ್ಟ ಎಂಬಂತಾಗಿದೆ. ಪ್ರಮುಖ ರಸ್ತೆಗಳಲ್ಲೇ ದೊಡ್ಡ ದೊಡ್ಡ ಗುಂಡಿಗಳು ಬಾಯ್ದೆರೆದಿದ್ದು, ಅಪಾಯ ಆಹ್ವಾನಿಸುತ್ತಿದೆ.

ಕೋಡಿ ಒಡೆದ ಕೆರೆಗಳು: ನರಸಾಪುರ ಕೆರೆ ಮತ್ತು ದೊಡ್ಡಬೊಮ್ಮಸಂದ್ರ ಕೆರೆ ಕೋಡಿ ಹರಿದಿದ್ದು, ನೀರು ನೀರುಗಾಲುವೆಗಳಲ್ಲಿ ತುಂಬಿ ಹರಿಯುತ್ತಿದೆ. ಪರಿಣಾಮ ಬ್ಯಾಟರಾಯನಪುರ ವ್ಯಾಪ್ತಿಯ ಭದ್ರಪ್ಪ ಬಡಾವಣೆ, ಬಾಲಾಜಿ ಬಡಾವಣೆ, ಸುರಭಿ ಬಡಾವಣೆ, ಸೋಮೇಶ್ವರ ಬಡಾವಣೆ, ಟಾಟಾನಗರ, ಚಿಕ್ಕ ಬೊಮ್ಮಸಂದ್ರ, ಆಂಜನೇಯ ಬಡಾವಣೆ, ವಾಯುನಂದನ ಬಡಾವಣೆ ಸಂಪೂರ್ಣವಾಗಿ ಜಾಲಾವೃತವಾಗಿದೆ. ಪಾಲಿಕೆ ವತಿಯಿಂದ ಸ್ಥಳೀಯ ನಿವಾಸಿಗಳಿಗೆ ಹಾಲು, ಆಹಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ನಿವಾಸಿಗಳ ಸ್ಥಳಾಂತರಕ್ಕಾಗಿ ಹೆಚ್ಚುವರಿಯಾಗಿ 2 ಬೋಟ್​ಗಳನ್ನು ನಿಯೋಜಿಸಲಾಗಿದೆ.

30 ಕೆರೆಗಳು ಭರ್ತಿ: ನಿರಂತರ ಮಳೆಯಿಂದಾಗಿ ಆರ್.ಆರ್.ನಗರ, ಯಲಹಂಕ, ದಾಸರಹಳ್ಳಿ ವಲಯದ 30ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಒಂದೇ ದಿನ 10ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿವೆ.

ಇನ್ನೂ ಮೂರು ದಿನ ಮಳೆ: ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ, ರಾಜ್ಯದಲ್ಲಿ ಇನ್ನೂ 3 ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಏನೆಲ್ಲ ಸಮಸ್ಯೆ?

  • ಸಹಕಾರದ ನಗರದ ಹಲವೆಡೆ ಸಮಸ್ಯೆ ಗಂಭೀರ
  • ಚಿತ್ರಕೂಟ ಅಪಾರ್ಟ್​ವೆುಂಟ್ ಗೋಡೆ ಕುಸಿತ
  • ರಾಜಕಾಲುವೆ ನೀರು ನುಗ್ಗಿ ಭಾರಿ ಅವ್ಯವಸ್ಥೆ
  • 3 ಅಡ್ಡರಸ್ತೆಗಳು ಜಲಾವೃತವಾಗಿ ಜನರ ಪರದಾಟ
  • ಪುಟ್ಟೇನಹಳ್ಳಿ ಕೆರೆ ಪಕ್ಕದಲ್ಲೂ ಮನೆಗಳು ಜಲಾವೃತ
  • ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್ ತತ್ತರ
  • ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
  • ಯಲಹಂಕದ ಸಾಯಿಬಾಬಾ ಬಡಾವಣೆ ಅವ್ಯವಸ್ಥೆ
  • ಹೆಬ್ಬಾಳ ವ್ಯಾಲಿನಿಂದ ಹಿಮ್ಮುಖವಾಗಿ ಬಂದ ನೀರು
  • ನೂರಾರು ಮನೆಗಳು ಜಲಾವೃತ, ಜನಜೀವನ ತತ್ತರ
  • ಬೈರತಿ ಗ್ರಾಮ, ಬ್ಲೆಸ್ಸಿಂಗ್ ಗಾರ್ಡನ್​ಗೂ ಜಲಾಘಾತ
  • ಹಾಲನಾಯಕನಹಳ್ಳಿಯಲ್ಲಿ ಕೋಡಿ ತುಂಬಿದ ಕೆರೆ
  • ಮನೆಗಳಿಗೆ ನುಗ್ಗಿದ ದಾಸರಹಳ್ಳಿ ಅಬ್ಬಿಗೆರೆ ಕೆರೆ ನೀರು

ಮಳೆ ಅನಾಹುತ ತಡೆಗಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸ್ಥಳ ಸಮೀಕ್ಷೆಯೂ ನಡೆಯುತ್ತಿದೆ. ಹಿಂದಿನ ವರ್ಷ್ಕತ ಈ ವರ್ಷ ಹೆಚ್ಚು ಮಳೆ ಅಗಿದ್ದು, ಅಲ್ಲಲ್ಲಿ ಅನಾಹá-ತಗಳು ಸಂಭವಿಸಿವೆ. ಹಾಗಾಗಿ ಸಮೀಕ್ಷೆ ನಡೆಸಿ ಮಳೆಯಿಂದ ಆಗಿರá-ವ ಪ್ರಕೃತಿ ವಿಕೋಪಕ್ಕೆ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ.

ಸಿದ್ದರಾಮಯ್ಯ, ಸಿಎಂ