ಜಿಲ್ಲೆ

ಕತ್ತಿವರಸೆ ಟೂರ್ನಿಯಲ್ಲಿ ಮೈಸೂರು ವಿವಿ ಭಾಗಿ

reportermys


ಮೈಸೂರು: ಪಂಜಾಬ್‌ನ ಗುರುನಾನಕ್ ದೇವ ವಿಶ್ವವಿವಿದ್ಯಾಲಯದಲ್ಲಿ ಜ.7 ರಿಂದ 10 ರವರೆಗೆ ನಡೆಯಲಿರುವ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕತ್ತಿವರಸೆ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಭಾಗವಹಿಸಿದೆ.


ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ, ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಯುವರಾಜ, ಗಜೇಂದ್ರ, ಕೆ.ಆರ್.ಸಚಿನ್ ಆಯ್ಕೆಯಾಗಿದ್ದರು.

ಇವರು ತಂಡದ ವ್ಯವಸ್ಥಾಪಕ ಡಾ.ಶಾಂತರಾಜು ಜತೆ ಗುರುನಾನಕ್ ದೇವ ವಿವಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.