ಇಂಡಿ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ತಳವಾರ ಮಹಿಳಾ ಸಮಾಜದಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯನ್ನು ಬಿ.ಕೆ. ಯಮುನಾ ಉದ್ಘಾಟಿಸಿದರು. ಪಾರ್ವತಿ ಸೊನ್ನದ, ಗಂಗೂಬಾಯಿ ಗಲಗಲಿ, ಪ್ರಜಾತಾ ಜಮಾದಾರ, ಭಾಗ್ಯ ಪಾಟೀಲ ಇದ್ದರು. 
ಜಿಲ್ಲೆ

ಹೆಣ್ಣು ವರ್ಣಿಸಲಾಗದ ಶಕ್ತಿ

ದತ್ತಾತ್ರೇಯ ಪಿ ಕುಲಕರ್ಣಿ

ಇಂಡಿ: ಜಗತ್ತಿನ ಎಲ್ಲ್ಲ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಎಲ್ಲರನ್ನೂ ಪ್ರೀತಿಯಲ್ಲಿ ಪೊರೆಯುವವಳು ಹೆಣ್ಣು. ಆಕೆ ಮಮತಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ. ಹೆಣ್ಣು ಎಂದರೆ ವರ್ಣಿಸಲಾಗದ ಶಕ್ತಿ ಎಂದು ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸೇವಾ ಕೇಂದ್ರ ರಾಜಯೋಗಿನಿ ಬಿ.ಕೆ. ಯಮುನಾ ಹೇಳಿದರು.

ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಇತ್ತೀಚೆಗೆ ತಳವಾರ ಮಹಿಳಾ ಸಮಾಜದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿ, ಮಹಿಳೆಯರು ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೂ ಒತ್ತಡದಲ್ಲೇ ದಿನವನ್ನು ಕಳೆಯುತ್ತಾಳೆ. ಒಂದಿಲ್ಲ ಒಂದು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾಳೆ. ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿ ಅನೇಕ ರೋಗಗಳಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕದಳಿ ವೇದಿಕೆ ಅಧ್ಯಕ್ಷೆ ಗಂಗೂಬಾಯಿ ಗಲಗಲಿ ಮಾತನಾಡಿ, ಇಂದು ಮಹಿಳಾ ಸಮಾನತೆ, ಶೋಷಣೆ, ತಾರತಮ್ಯ ಮತ್ತು ಹಿಂಸೆ ಮುಕ್ತ ಜೀವನಕ್ಕಾಗಿ ಹೋರಾಟ ನಡೆದೇ ಇದೆ. ಪ್ರತಿ ಮಹಿಳೆಯೂ ಹೋರಾಟದ ಪರಂಪರೆಯನ್ನು ಎತ್ತಿ ಹಿಡಿಯಬೇಕು ಎಂದರು.

ಸಾಹಿತಿ ಪಾರ್ವತಿ ಸೊನ್ನದ ಅಧ್ಯಕ್ಷತೆ ವಹಿಸಿದ್ದರು. ಪ್ರಜಾತಾ ಜಮಾದಾರ, ಭಾಗ್ಯ ಪಾಟೀಲ, ಸಾವಿತ್ರಿ ವಾಲೀಕಾರ, ಗಂಗೂ ವಾಲೀಕಾರ, ನಿಂಗಮ್ಮ ದಿಕ್ಸಂಗಿ, ಜ್ಯೋತಿ ಬಸರಕೋಡ, ದೀಪಿಕಾ ಸಾತಿಹಾಳ, ಭಕ್ತಿ ಜಮಾದಾರ, ರೇಖಾ ವಗ್ಗಿ, ಲಕ್ಷ್ಮೀ ಸೊನ್ನದ, ಪವಿತ್ರಾ ನಾಲವಾರ ಉಪಸ್ಥಿತರಿದ್ದರು. ಸುಜಾತಾ ಮಡ್ನಳ್ಳಿ ಸ್ವಾಗತಿಸಿದರು. ಪಾರ್ವತಿ ಕೋಳಿ ವಂದಿಸಿದರು.ಜಯಮಾಲಾ ಪಾಟೀಲ ನಿರೂಪಿಸಿದರು.