ಕೋಲ್ಹಾರದ ಸಂಗಮೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಐಶ್ವರ್ಯ ದಾಸರ, ಸ್ವಾತಿ ಜಂಬಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ಬಿ.ಯು ಗಿಡ್ಡಪ್ಪಗೋಳ, ಎಸ್​.ಎಸ್​. ಪತಂಗಿ, ಸಿ.ಎಸ್​. ಗಿಡ್ಡಪ್ಪಗೋಳ ಗೌರವಿಸಿದರು. 
ಜಿಲ್ಲೆ

ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು

ಗಿರೀಶ ಸಗರ

ಕೊಲ್ಹಾರ : ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಅಥ್ಲೆಟಿಕ್​ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ ದಾಸರ ಟ್ರಿಪಲ್​ ಜಂಪ್​ದಲ್ಲಿ ಪ್ರಥಮ, 200 ಮೀಟರ್​ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಸ್ವಾತಿ ಜಂಬಗಿ ಕ್ರಾಸ್​ ಕಂಟ್ರಿ ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಗಮೇಶ್ವರ ವಿದ್ಯಾವರ್ಧಕ ಸಂದ ಅಧ್ಯ ಬಿ.ಯು ಗಿಡ್ಡಪ್ಪಗೋಳ, ಕಾರ್ಯದರ್ಶಿ ಎಸ್​.ಎಸ್​ ಪತಂಗಿ, ನಿರ್ದೇಶಕ ಸಿ.ಎಸ್​ ಗಿಡ್ಡಪ್ಪಗೋಳ, ಟಿ.ಟಿ. ಹಗೆದಾಳ, ಪ್ರಾಚಾರ್ಯ ಎ.ಡಿ. ಚವ್ಹಾಣ, ಉಪನ್ಯಾಸಕರಾದ ರಮೇಶ ತೋಟದ, ಮಂಜುನಾಥ ಮಟ್ಯಾಳ ಸಾಧಕ ವಿದ್ಯಾರ್ಥಿನಿಯರನ್ನು ಗೌರವಿಸಿದರು.