ಜಿಲ್ಲೆ

ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆ


ಮೈಸೂರು:
ನಗರದ ಕೆಎಸ್‌ಆರ್‌ಪಿ ಕ್ವಾರ್ಟರ್ಸ್‌ನಲ್ಲಿ ಸೋಮವಾರ ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.


ನಜರ್‌ಬಾದ್ ಠಾಣೆಯ ಪೇದೆ ಗೀತಾ(32) ಮೃತರು. ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಗೀತಾ, ಅನಾರೋಗ್ಯ ಕಾರಣ ರಜೆ ಹಾಕಿ ಮಧ್ಯಾಹ್ನ 12 ಗಂಟೆಗೆ ಮನೆಗೆ ಹಿಂದಿರುಗಿದ್ದರು. ಈ ವೇಳೆ ಮನೆಯಲ್ಲಿದ್ದ ಪತಿಯನ್ನು ಹಣ ಡ್ರಾ ಮಾಡಿ ತರುವಂತೆ ಹೊರಗೆ ಕಳುಹಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣ ಡ್ರಾ ಮಾಡಲು ತೆರಳಿದ್ದ ಪತಿ, ಎಟಿಎಂ ಕಾರ್ಡ್‌ನ ಒಟಿಪಿ ನಂಬರ್ ಕೇಳಲು ಹಲವು ಬಾರಿ ಫೋನ್ ಮಾಡಿ ಕೊನೆಗೆ ಮನೆಗೆ ವಾಪಸ್ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರ ಪತಿ ನೀಡಿದ ದೂರಿನ ಮೇರೆಗೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.