ಜಿಲ್ಲೆ

ಭಾಸ್ಕರ ಜೋಶಿ ಶಿರಳಗಿಗೆ ಸನ್ಮಾನ

ವಿನಯ ಹೆಗಡೆ

ಸಿದ್ದಾಪುರ: ತಾಲೂಕಿನ ಅಳಗೋಡಿನ ತಾಳಮದ್ದಲೆ ಅರ್ಥಧಾರಿಗಳಾಗಿದ್ದ ದಿ.ತಿಮ್ಮಪ್ಪ ತಿಮ್ಮಯ್ಯ ಹೆಗಡೆ ಇವರ ಸಂಸ್ಮರಣಾರ್ಥ ಖ್ಯಾತ ಹಿರಿಯ ಯಕ್ಷಗಾನ ಕಲಾವಿದರಾದ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಸನ್ಮಾನ ಹಾಗೂ ಭುವನೇಶ್ವರಿ ತಾಳಮದ್ದಲೆ ಕೂಟ ಭುವನಗಿರಿ ಇವರಿಂದ ಭರತಾಗಮನ ತಾಳಮದ್ದಲೆ ಭಾನುವಾರ ಜರುಗಿತು.

ಸನ್ಮಾನ ಸ್ವೀಕರಿಸಿ ಮಾತಾನಾಡಿದ ಭಾಸ್ಕರ ಜೋಶಿ ಯಕ್ಷಗಾನದಲ್ಲಿ ತಾವು ನಡೆದುಬಂದ ಹಾದಿಯನ್ನು ವಿವರಿಸಿ, ಎದುರಿಸಿದ ಸವಾಲುಗಳ ಮಾಹಿತಿ ನೀಡಿ ಹಿಂದಿನ ಹಾಗೂ ಈಗಿನ ಯಕ್ಷಗಾನ ಕಲೆ ಯಾವ ರೀತಿ ಬದಲಾಗಿದೆ ಎನ್ನುವುದನ್ನು ವಿವರಿಸಿದರು.

ಕೆ.ಜಿ.ಮಂಜುನಾಥ ಕೆಳಮನೆ ಅಧ್ಯಕ್ಷತೆವಹಿಸಿದ್ದರು ಶ್ರೀಧರ ಭಟ್ಟ ಮುತ್ತಿಗೆ ಉಪಸ್ಥಿತರಿದ್ದರು.

ಸಂಘಟಕ ರಾಮಕೃಷ್ಣ ತಿಮ್ಮಪ್ಪ ಹೆಗಡೆ ಪ್ರಾಸ್ತಾವಿಕ ಮಾತಾಡಿದರು. ಸಾಹಿತಿ ಟಿ.ಎಂ.ರಮೇಶ ಸನ್ಮಾನ ಪತ್ರ ವಾಚಿಸಿದರು. ಜಯರಾಮ ಭಟ್ಟ ಗುಂಜಗೋಡ ಅಭಿನಂದನಾ ಮಾತನಾಡಿದರು. ಕೌಸ್ತುಭ ಹೆಗಡೆ ಅಳಗೋಡ ನಿರ್ವಹಿಸಿದರು.

ನಂತರ ಭುವನೇಶ್ವರಿ ತಾಳಮದ್ದಲೆ ಕೂಟ ಭುವನಗಿರಿ ಇವರಿಂದ ಭರತಾಗಮನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಕೆ.ಜಿ.ರಾಮರಾವ್ ಕೆಳಮನೆ, ಕೆ.ಜಿ.ಮಂಜುನಾಥ ಕೆಳಮನೆ, ಮಂಜುನಾಥ ಹೆಗಡೆ ಕಂಚಿಮನೆ, ಮಿತ್ರ ಮಧ್ಯಸ್ಥ ಗೊರಮನೆ ಸಹಕರಿಸಿದರು.

ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಟಿ.ಎಂ. ರಮೇಶ, ಗಣಪತಿ ಹೆಗಡೆ ಗುಂಜಗೋಡ, ಮಹಾಬಲೇಶ್ವರ ಭಟ್ಟ ಗುಂಜಗೋಡ, ಗಣಪತಿ ಹೆಗಡೆ ಹೊನ್ನೆಕೈ, ಜಯರಾಮ ಭಟ್ಟ ಗುಂಜಗೋಡ, ಕೌಸ್ತುಭ ಹೆಗಡೆ ಅಳಗೋತ್ರಿವರು ವಿವಿಧ ಪಾತ್ರನಿರ್ವಹಿಸಿದರು.