ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಶ್ರೀತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆರ್.ಕೆ. ಕೋಕಾಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ಮನೋಜ ಹೊಂಬಾಳ, ಅನುಪಮಾ ಚಿಗರಿ, ಮನ್ಸೂರ್ ನದಾಫ್, ಅನಿತಾ ಕಡೇಮನಿ ಮತ್ತು ಅಪೂರ್ವ ಮ್ಯಾದಗೋಪ್ಪ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಸನ್ಮಾನಿಸಿದರು. ಕನ್ನಡ ಶಿಕ್ಷಕಿ ಭಾರತಿ ವೀರನಗೌಡ್ರ, ಹಿಂದಿ ಶಿಕ್ಷಕ ಸ್ವಾಮಿ ಎಂ.ಐ. ಇತರರು ಇದ್ದರು.