ಜಿಲ್ಲೆ

ಡಿ.17ಕ್ಕೆ ಬನ್ನಂಜೆ ಬಾಬು ಅಮೀನ್​ ಅಭಿನಂದನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್​ ಅವರ 80ನೇ ವರ್ಷದ ಜನ್ಮದಿನದ ಅಂಗವಾಗಿ ಅಭಿನಂದನ ಕಾರ್ಯಕ್ರಮ 'ಸಿರಿತುಪ್ಪೆ' ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ಡಿ.17ರಂದು ನಡೆಯಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 8.45ಕ್ಕೆ 9ಕ್ಕೆ ನಾಗಸ್ವರ ವಾದನ, 9.30ಕ್ಕೆ ಡೋಲುವಾದನ, 9.50ಕ್ಕೆ ಪಾಡ್ಡನ ನಡೆಯಲಿದೆ. 10ಕ್ಕೆ ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ ಪ್ರವರ್ತಕ ನಾಡೋಜ ಡಾ. ಜಿ.ಶಂಕರ್​ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಬನ್ನಂಜೆ ಬಾಬು ಅಮೀನ್​ ಅವರ ತುಳುನಾಡ ಸುತ್ತಮುತ್ತ ಹಾಗೂ ಗರೋಡಿ ಒಂದು ಚಿಂತನೆ ಪುಸ್ತಕ ಬಿಡುಗಡೆ ಮಾಡಲಾಗುವುದು. 10.30ಕ್ಕೆ ಬನ್ನಂಜೆ ಬಾಬು ಅಮೀನ್​ ಅವರ ತುಳುನಾಡ ಜಾನಪದ ಸಾಹಿತ್ಯ ಸಂಕಥನ ವಿಚಾರಗೋಷ್ಠಿ, 11.45ಕ್ಕೆ ಪಟ್ಲ ಸತೀಶ್​ ಶೆಟ್ಟಿ ಮತ್ತು ಬಳಗದ ಸುದರ್ಶನ ವಿಜಯ ಯಕ್ಷಗಾನ, ಮಧ್ಯಾಹ್ನ 1.30ಕ್ಕೆ ಆರಾಧನಾ ಗೋಷ್ಠಿ, 2.30ಕ್ಕೆ ವೀನಸ್​ ಇಂಟರ್​ನ್ಯಾಷನಲ್​ ಸಾರಥ್ಯದಲ್ಲಿ ಬನ್ನಂಜೆ ಬಾಬು ಅಮೀನ್​ ಅವರ ಸಾಕ್ಷಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

3ಗಂಟೆಗೆ ಅಭಿಮಾನದ ಅಭಿವಂದನೆ ಅರ್ಪಣೆ ನಡೆಯಲಿದ್ದು, ಮಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಚೆನ್ನಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ದಿನೇಶ್​ ಅಮೀನ್ಮಟ್ಟು ಅಭಿನಂದನಾ ಭಾಷಣ ಮಾಡಲಿದ್ದಾರೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್​ ಅಭಿನಂದನಾ ಗ್ರಂಥ ಸಿರಿ ಕುರಲ್​ ಬಿಡುಗಡೆ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಳಿವಿನಂಚಿನಲ್ಲಿರುವ ತುಳುನಾಡಿನ ಪರಿಕರಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಜನಪದದ ಪ್ರಕಾರಗಳ ಪ್ರಾತಕೆ ನಡೆಯಲಿದೆ. ಜನಪದ ನೃತ್ಯಗಳನ್ನೂ ಆಯೋಜಿಸಲಾಗಿದೆ ಎಂದರು.

ಕಾರ್ಯಾಧ್ಯಕ್ಷ ರುನಾಥ್​ ಮಾಬಿಯಾನ್​, ಸಂಚಾಲಕ ಭಾಸ್ಕರ್​ ಸುವರ್ಣ ಕನ್ನರ್ಪಾಡಿ, ಕಾರ್ಯದರ್ಶಿ ಪಾಂಡು ಕೋಟ್ಯಾನ್​, ಅಭಿನಂದನ ಗ್ರಂಥ ಸಂಪಾದಕ ಮಂಡಳಿಯ ದಯಾನಂದ ಕರ್ಕೇರ, ಮಹೇಶ್​ ಸುವರ್ಣ ಉಪಸ್ಥಿತರಿದ್ದರು.