ಬಸವಕಲ್ಯಾಣ: ಸಮಾಜದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಸತಿನಿಲಯ ಆರಂಭಿಸಲು ಪ್ರಯತ್ನಿಸುವುದಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಮಂಠಾಳ ಗ್ರಾಮದ ಮಹಾದೇವ ಮಂದಿರದಲ್ಲಿ ಸಮಾನ ಮನಸ್ಕ ಸ್ನೇಹಿತರ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ನೇತೃತ್ವ ವಹಿಸಿದ್ದ ಖೇಳಗಿ ಶ್ರೀ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮುಖಂಡ ಮಹಾದೇವ ಮಾಲಿಪಾಟೀಲ್ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಶಟಗಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ನಿವೃತ್ತ ನ್ಯಾಯಾಧೀಶ ಶಂಕರರಾವ ಪಾಟೀಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೀಲಾಬಾಯಿ ತ್ರಿಮುಖೆ, ಮಹಾಸಭಾ ತಾಲೂಕು ಅಧ್ಯಕ್ಷ ಶಶಿಕಾಂತ ದುರ್ಗೆ, ರಾಮಲಿಂಗಪ್ಪ ಹಾರಕೂಡೆ, ಗುರು ಮುಗಳಿ, ಸಂಜೀವಕುಮಾರ ಸುಗರೆ, ಶಿವರಾಜ ಪಾರಾ, ಬಾಬುರಾವ ಪಾಟೀಲ್, ಚಂದ್ರಕಾಂತ ಝುಂಜಾ, ಸಂಗಪ್ಪ ವಗಶೆಟ್ಟೆ, ರಾಮ ಹತ್ತೆ, ಸಂತೋಷ ಜವಳಗೆ, ಶಿವರಾಜ ಮಡಕೆ ಇತರರಿದ್ದರು. ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ವಂದಿಸಿದರು. ರವೀಂದ್ರ ಶಾಯಪ್ಪ ನಿರೂಪಣೆ ಮಾಡಿದರು. ಸಿದ್ದಪ್ಪ ಸುಗುರೆ ಸ್ವಾಗತ ಗೀತೆ ಹಾಡಿದರು.